ಗೂನಡ್ಕ: ಮಳೆಗೆ ಕಂಪೌಂಡ್ ಕುಸಿತಗೊಂಡು ಮನೆಗೆ ಹಾನಿ

0

ಮಳೆಗೆ ಕಂಪೌಂಡ್ ಕುಸಿತಗೊಂಡು ಮನೆಗೆ ಹಾನಿ ಸಂಭವಿಸಿದ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ದರ್ಖಾಸ್ತು ಎಂವಲ್ಲಿ ಮೇ.16ರಂದು ರಾತ್ರಿ ಸಂಭವಿಸಿದೆ‌.

ಗೂನಡ್ಕದ ದರ್ಖಾಸ್ತು ರಸ್ತೆಯ ಬದಿಯಿರುವ ಸಿನನ್ ಜಡ್ಜ್ ಎಂಬವರ ಕಂಪೌಂಡ್ ಮಳೆಗೆ ಕುಸಿದಿದ್ದು, ರಸ್ತೆ ಬ್ಲಾಕ್ ಆದುದಲ್ಲದೇ ಇದರ ,ಪಕ್ಕದಲ್ಲೇ ಇದ್ದ ಕೆ. ಎಸ್. ಹ್ಯಾರಿಸ್ ಎಂಬವರ ಕಂಪೌಂಡ್ ಕೂಡಾ ಬಿದ್ದು ಮಾರಿಯಮ್ಮ ಎಂಬವರ ಮನೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.