ಪಂಜ: ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ಪದಗ್ರಹಣ ಸಮಾರಂಭ

0

ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘ ಪಂಜ ಘಟಕ ಇದರ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಮೇ.28 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು.

ಘಟಕದ ಅಧ್ಯಕ್ಷ ಮನೋಹರ್ ಕಾರ್ಜ ಸಭಾಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷ ದೇವಪ್ಪ ಎಚ್ ಉದ್ಘಾಟಿಸಿದರು .

ಸುಳ್ಯ ತಾಲೂಕು ಬಿ.ಎಂ.ಎಸ್ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ , ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಪಂಜ ಘಟಕದ ಕಾರ್ಯದರ್ಶಿ ನಾಗೇಶ್ ಕುಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಸಂಪ್ಯಾಡಿ, ಕಾರ್ಯದರ್ಶಿಯಾಗಿ ಜೀನತ್ ಚೀಮುಳ್ಳು ಕೋಶಾಧಿಕಾರಿಯಾಗಿ ಪ್ರಶಾಂತ್ ಕಾರ್ಜ, ಉಪಾಧ್ಯಕ್ಷರಾಗಿ ದೇವಪ್ಪ ಹೆಚ್, ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಕೆರೆಕೋಡಿ ಆಯ್ಕೆಯಾಗಿ ಪದಗ್ರಹಣ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ದಾಮೋದರ ನೇರಳ ನಿರೂಪಿಸಿದರು.ಗಣೇಶ್ ನಾಗತೀರ್ಥ ಸ್ವಾಗತಿಸಿದರು.ನಾಗೇಶ್ ಕುಳ್ಳಾಜೆ ವರದಿ ವಾಚಿಸಿದರು.ಅಶೋಕ್ ದೇರಾಜೆ ವಂದಿಸಿದರು