ಮೇಘ ಸ್ಪೋಟದಿಂದ ಎರಡು ಗಂಟೆ ಭಾರೀ ಮಳೆ

0

ನಿನ್ನೆ ಸಂಜೆ ಸುಮಾರು ಎರಡು ಗಂಟೆ ಕಾಲ ಕೊಲ್ಲಮೊಗ್ರ, ಕಲ್ಮಕಾರು, ಸುಬ್ರಹ್ಮಣ್ಯ, ಏನೆಕಲ್ ಮೊದಲಾದ ಕೆಲವು ಕಡೆ ಮೇಘ ಸ್ಫೋಟದಿಂದ ಭಾರೀ ಮಳೆ ಸುರಿದ ಪರಿಣಾಮ ನಾಶ ನಷ್ಟ ಸಂಭವಿಸಿದೆ.

ಕೊಲ್ಲ ಮೊಗ್ರ, ಕಲ್ಮಕಾರು ಭಾಗದಲ್ಲಿ ಕಳೆದ ವರ್ಷಗಳ ಜಲಪ್ರಳಯದ ರೀತಿಯಲ್ಲಿ ಒಮ್ಮಿಂದೊಮ್ಮೆಗೆ ನೆರೆ ನೀರು ಹರಿಯಿತು.

ಕೊಲ್ಲಮೊಗ್ರು ಗ್ರಾಮದ ಪನ್ನೆ ಬಳಿ ಸುಲಿದ ತೆಂಗಿನ ಕಾಯಿ ಲೋಡ್ ಇದ್ದ ಪಿಕ್ ಅಪ್ ನದಿ ದಾಟುವಾಗ ಒಮ್ಮೆಲೇ ಹೊಳೆ ಯಲ್ಲಿ ನೀರು ಹರಿಯಿತು. ಸಾವಿರಾರು ತೆಂಗಿನಕಾಯಿ ನೀರು ಪಾಲಾಗುವುದು ತಪ್ಪಿತು.

ಕೊತ್ನಡ್ಕದ ರಾಮಕೃಷ್ಣ ಕೊತ್ನಡ್ಕ ಅವರ ಮನೆಯಿಂದ ಮಹೇಶ್ ಎಂಬವರು ತೆಂಗಿನಕಾಯಿ ತರಲು ಪಿಕ್ ಅಪ್ ನಲ್ಲಿ ತೆರಳಿದ್ದು ವಾಪಸು ಬರುವಾಗ ಪನ್ನೆ ಬಳಿಯ ಮಡಿವಾಳ ಮೂಲೆ ಎಂಬ ನೀರಿನ ಹರಿವು ಹೆಚ್ಚಾಗಿತ್ತು.

ನದಿ ದಾಟುತಿದ್ದಂತೆ ಒಮ್ಮೆಲೆ ನೀರು ಹರಿದು ಅಪಾಯದ ಮುನ್ಸೂಚನೆ ದೊರೆಯಿತು. ಆದರೂ ಸಾಹಸದಿಂದ ಪಿಕ್ ಅಪ್ ದಾಟಿಸಿದರು.