ಸುಳ್ಯ ರಥಬೀದಿಯಲ್ಲಿ ವೈಟ್ ಕ್ಲಬ್ ಬ್ರಾಂಡೆಡ್ ಮೆನ್ಸ್ ವೇರ್ ಶುಭಾರಂಭ

0

ಸುಳ್ಯದ ರಥಬೀದಿಯಲ್ಲಿರುವ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಅಜಿತ್ ಉಪ್ಪಳ ರವರ ಮಾಲಕತ್ವದ ಬ್ರಾಂಡೆಡ್ ಪುರುಷರ ಸಿದ್ಧ ಉಡುಪುಗಳ ಮಳಿಗೆ ವೈಟ್ ಕ್ಲಬ್ ಸೆ.16 ರಂದು ಶುಭಾರಂಭಗೊಂಡಿತು.

ಉಪ್ಪಳದ
ಹಿರಿಯ ಉದ್ಯಮಿ ಪುರುಷೋತ್ತಮ ರವರು ದೀಪ ಪ್ರಜ್ವಲಿಸಿ ಮಳಿಗೆಯನ್ನು ಶುಭಾರಂಭಗೊಳಿಸಿದರು.

ಈ ಸಂದರ್ಭದಲ್ಲಿ ವಿನಾಯಕ ಕಾಂಪ್ಲೆಕ್ಸ್ ಮಾಲಕರಾದ ಪ್ರಸಾದ್ ಹಾಗೂ ಮಾಲಕರ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದು ನೂತನ ಮಳಿಗೆಗೆ ಶುಭ ಹಾರೈಸಿದರು.
ಶ್ರೀಮತಿ ಸಂಚಿತ ಅಜಿತ್ ಉಪ್ಪಳ ರವರು ಎಲ್ಲರನ್ನೂ ಸ್ವಾಗತಿಸಿದರು.

ನೂತನ ಮಳಿಗೆಯಲ್ಲಿ ಪುರುಷರ ಬ್ರಾಂಡೆಡ್ ಶರ್ಟ್ ಮತ್ತು ಜೀನ್ಸ್ ,ಫಾರ್ಮಲ್ಸ್ ಪ್ಯಾಂಟ್ ಅಲ್ಲದೆ ಒಳ ಉಡುಪುಗಳು,ಬ್ರಾಂಡೆಡ್ ಟೀಶರ್ಟ್ಸ್ ಮತ್ತು ಇನ್ನಿತರ ಟ್ರೆಂಡಿಂಗ್ ಸಿದ್ಧ ಉಡುಪುಗಳು ಮಿತ ದರದಲ್ಲಿ ಲಭ್ಯವಿರುವು ದಾಗಿ ಮಾಲಕರು ತಿಳಿಸಿದರು.