ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಮತಿ ಪೌಲಿನ್ ಡಿಸೋಜರಿಗೆ ಬೀಳ್ಕೊಡುಗೆ ಸಮಾರಂಭ

0

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು 12 ವರ್ಷಗಳಿಂದ ಬೋಧಕೇತರ ಸಿಬ್ಬಂದಿಯಾಗಿದ್ದ ಶ್ರೀಮತಿ ಪೌಲಿನ್ ಡಿಸೋಜ ರವರ ಬೀಳ್ಕೋಡುಗೆ ಕಾರ್ಯಕ್ರಮ ವು ಮೇ.31 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ. ವಿಕ್ಟರ್ ಡಿಸೋಜ ರವರು ವಹಿಸಿದ್ದರು.

ವೇದಿಕೆಯಲ್ಲಿ ಶ್ರೀಮತಿ ಪೌಲಿನ್ ಡಿಸೋಜಾ,ಶಾಲಾ ಮುಖ್ಯ ‌ಶಿಕ್ಷಕಿ ಸಿ.ಬಿನೋಮ,
ಚಚ್೯ ಪಾಲನ ಮಂಡಳಿಯ ಉಪಾಧ್ಯಕ್ಷರಾದ ನವೀನ್ ಮಚಾದೋ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ದೇವಿಲತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಜ್ಯೋತಿ ಕೆ.ವಂದನಾರ್ಪಣೆ ಗೈದರು.