ಸುಳ್ಯ ನ್ಯಾಯಾಲಯದ ಅಟೆಂಡರ್ ರಾಮಣ್ಣ ಗೌಡರಿಗೆ ಬೀಳ್ಕೊಡುಗೆ

0

ಸುಳ್ಯ ನ್ಯಾಯಾಲಯದ ಅಟೆಂಡರ್ ಆಗಿದ್ದ ರಾಮಣ್ಣ ಗೌಡರು ಮೇ.31ರಂದು ಸೇವಾ ನಿವೃತ್ತಿ ಹೊಂದಿದ್ದು, ಅದೇ ದಿನ ಸಂಜೆ ನ್ಯಾಯಾಲಯದ ಸಭಾಂಗಣದಲ್ಲಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಮೋಹನ್ ಬಾಬುರವರು, ನಿವೃತ್ತರಾದ ರಾಮಣ್ಣ ಗೌಡ ಹಾಗೂ ಅವರ ಪತ್ನಿ ಶ್ರೀಮತಿ ದಮಯಂತಿ ಯವರನ್ನು ಶಾಲು, ಪೇಟ, ಹಾರ ತೊಡಿಸಿ ಸನ್ಮಾನಿಸಿದರು. ನೆನಪಿನ ಕಾಣಿಕೆಯಾಗಿ ಚಿನ್ನದ ಉಂಗುರ ತೊಡಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ರಾಮಣ್ಣರ ಸೇವೆ ನ್ಯಾಯಾಲಯಕ್ಕೆ ಅನನ್ಯವಾದುದು. ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ಅವರಿಗೆ ಒಳ್ಳೆಯದಾಗಲಿ” ಎಂದರು.

ಕಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕು.ಅರ್ಪಿತಾ “ರಾಮಣ್ಣರು ಎಲ್ಲರಿಗೆ ಗೌರವ ಕೊಡುವ ರೀತಿ ಹಾಗೂ ಅವರ ಸೇವೆಯನ್ನು ಶ್ಲಾಘಿಸಿದರು.

ಹಿರಿಯ ಮತ್ತು ಕಿರಿಯ ಸಹಾಯಕ ಸರಕಾರಿ ಅಭಿಯೋಕರಾದ ರಮೇಶ್ ಆರ್ ಮತ್ತು ಆರೋನ್ ಡಿ.ಸೋಜ, ಕಿರಿಯ ವಿಭಾಗದ ಶಿರಸ್ತೇದಾರರಾದ ಶಶಿಕಲಾ.ಹೆಚ್.ಎಸ್, ಸಿಬ್ಬಂದಿಗಳಾದ ವಿಜಯ ಕುಮಾರಿ ಅನಿಸಿಕೆ ವ್ಯಕ್ತ ಪಡಿಸಿದರು.

ಹಿರಿಯ ನ್ಯಾಯಾಲಯದ ಶಿರಸ್ತೇದಾರರಾದ
ಗಿರೀಶ್ ಹೆಚ್ ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತಿತರಿದ್ದರು.