ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ರೋಟರಿ ಕ್ಲಬ್ ಸುಳ್ಯ ಇದರ ಪ್ರಾ ಯೋಜಕತ್ವದಲ್ಲಿ ಮುನ್ನಡೆಸಲ್ಪಡುವ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ(ರಿ.)ಆಡಳಿತಕ್ಕೆ ಒಳಪಟ್ಟ ಪ್ರತಿಷ್ಟಿತ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಅಂಬೆಕಲ್ಲುರವರು ವಿಶ್ವ ಪರಿಸರ ದಿನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಹಶಿಕ್ಷಕಿ ಶ್ರೀಮತಿ ರಶ್ಮಿ ಎಸ್. ಎನ್. ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ವಿಶ್ವಪರಿಸರ ದಿನದ ಜಾಗೃತಿ ಮೂಡಿಸುವ ಬಗ್ಗೆ ಕಿರು ನೃತ್ಯ ಪ್ರಹಸನ ನಡೆಯಿತು.6ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಯ ಪಿ. ಡಿ. ಪರಿಸರದ ಮಹತ್ವ ಬಗ್ಗೆ ಭಾಷಣ ಮಾಡಿದಳು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವಿದ್ಯಾರ್ಥಿಗಳು ಅಸೆಂಬ್ಲಿಯನ್ನು ನಡೆಸಿಕೊಟ್ಟರು. ವಿಜ್ಞಾನ ಶಿಕ್ಷಕಿಯರ ಸಹಕಾರದೊಂದಿಗೆ ಕಾರ್ಯಕ್ರಮ ಅನಾವರಣಗೊಂಡಿತು.