ಕರಂಬಿಲ ಸ.ಕಿ.ಪ್ರಾ. ಶಾಲಾ ಪ್ರಾರಂಭೋತ್ಸವ

0

ಸ.ಕಿ.ಪ್ರಾ.ಶಾಲೆ ಕರಂಬಿಲದಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. ಶಾಲೆಗೆ ಸೇರಿದ ನೂತನ ಮಕ್ಕಳನ್ನು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಮಕ್ಕಳನ್ನು ಕರೆತಂದು ಆರತಿ ಬೆಳಗಿ ಶಾಲೆಗೆ ಬರಮಾಡಿಕೊಂಡ ನಂತರ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಕುಕ್ಕಯಕೋಡಿ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು. ಹಿರಿಯರಾದ ಗಿರಿಯಪ್ಪ ಗೌಡ ಕುಕ್ಕಯಕೋಡಿ ಹಾಗೂ ಅಬ್ದುಲ್ ಕುಂಞಿ ಉಳ್ಳಲಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳನ್ನು ಹರಸಿದರು.

ಸರ್ಕಾರದ ಉಚಿತ ಸೌಲಭ್ಯಗಳಾದ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀ ಮತಿ ಸುನೀತಾ ಅಲೆಂಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕರು, ಎಸ್.ಡಿ.ಎಂಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಪುಟಾಣಿಗಳು, ಅಕ್ಷರದಾಸೋಹ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರಿಗೂ ಶಾಲಾ ವತಿಯಿಂದ ಹಾಗೂ ಪೋಷಕರಿಂದ ಸಿಹಿತಿಂಡಿ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಭುವನ ಬಿ.ಆರ್ ಸ್ವಾಗತಿಸಿ, ಅತಿಥಿ ಶಿಕ್ಷಕಿ ಗಾಯತ್ರಿ ವಂದಿಸಿದರು. ಸಹಶಿಕ್ಷಕಿ ಭವ್ಯ ಬಿ ಕಾರ್ಯಕ್ರಮ ನಿರೂಪಿಸಿದರು.