ಬೆಳ್ಳಾರೆ – ನೆಟ್ಟಾರು ರಸ್ತೆ ಬದಿ ಅಪಾಯದಲ್ಲಿರುವ ಮರಗಳು

0

ಬೆಳ್ಳಾರೆಯಿಂದ ನೆಟ್ಟಾರು ಕಡೆಗೆ ಹೋಗುವ ರಸ್ತೆಯಲ್ಲಿ ರಸ್ತೆ ಬದಿ ಇರುವ ಮರಗಳು ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆ ಬದಿಯಲ್ಲಿ ಇರುವ ಮರಗಳು ರಸ್ತೆಗೆ ವಾಲಿಕೊಂಡಿದ್ದು ಗಾಳಿ ಮಳೆಗೆ ಮರ ರಸ್ತೆಗೆ ಬೀಳುವ ಸಂಭವವಿದ್ದು ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮರಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.