ಬೆಳ್ಳಾರೆಯಲ್ಲಿ 1812 ನೇ ಮದ್ಯವರ್ಜನ ಶಿಬಿರ ಸಮಾರೋಪ

0

ಶಿಬಿರದಿಂದ ಸಾಮಾಜಿಕ ಸಾಮರಸ್ಯರವನ್ನು ಒಗ್ಗೂಡಿಸುವ ಕೆಲಸ : ರಮಾನಾಥ ರೈ

ಶಿಬಿರಾರ್ಥಿಗಳು ಸಮಾಜದಲ್ಲಿ ಉತ್ತಮ ನಾಯಕರಾಗಿ ಬೆಳೆಯಲಿ : ಭಾಗೀರಥಿ ಮುರುಳ್ಯ

ಬದುಕನ್ನು ಪರಿವರ್ತನೆಗೊಳಿಸುವ ಕಾರ್ಯಕ್ರಮ : ಎಸ್.ಅಂಗಾರ

“ಯಾರೂ ಕೂಡ ಕುಡಿತದ ದಾಸರಾಗಬಾರದು.ಶಿಬಿರಾರ್ಥಿಗಳ ಮನೆಯವರು ತುಂಬಾ ಖುಷಿಯಿಂದ ಇವತ್ತು ಇಲ್ಲಿಗೆ ಬಂದಿದ್ದಾರೆ.
ಶಿಬಿರಾರ್ಥಿಗಳು ಕುಡಿತದ ಚಟ ಬಿಡುತ್ತಾರೆ ಎಂಬ ಆಶಾಭಾವನೆ ಅವರಲ್ಲಿದೆ. ಶಿಬಿರಾರ್ಥಿಗಳು ಕುಡಿತ ಬಿಟ್ಟು ಸಮಾಜದಲ್ಲಿ ಗೌರವಾನ್ವಿತ ಪ್ರಜೆಗಳಾಗಿ ಬಾಳುವ ಮುಖಾಂತರ ಸಾಮಾಜಿಕ ಸಾಮರಸ್ಯವನ್ನು ಒಗ್ಗೂಡಿಸುವ ಕೆಲಸ ಶಿಬಿರದಿಂದ ಆಗಬೇಕು.ಮನುಷ್ಯ ಮನುಷ್ಯನ ಮಧ್ಯೆ ಪ್ರೀತಿಯನ್ನು ಬೆಸೆಯುವ ಕೆಲಸ ಆಗಲಿ ಎಂದು ಮಾಜಿ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಹೇಳಿದರು.


ಅವರು ಜು.09 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಕುಡಿತದ ಚಟದಿಂದ ಹೊರಗೆ ಬರಬೇಕು.ನವಜೀವನಕ್ಕೆ ಪಾದಾರ್ಪಣೆ ಮಾಡಬೇಕು ಉತ್ತಮವಾಗಿ ಜೀವನ ನಡೆಸಬೇಕು ಎಂದು ಅವರು ಹೇಳಿದರು.


ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ಮಾಜಿ ಸಚಿವ ಎಸ್.ಅಂಗಾರ,
ಅಖಿಲ ಕರ್ನಾಟಕ ಜನಜಾಗೃತಿ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ,ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ,ಸುಳ್ಯ ಸೇವಾ ಭಾರತಿ ಹೆಲ್ಪ್ ಲೈನ್ ಉಪಾಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಬೆಳ್ಳಾರೆ ಪೊಲೀಸ್ ಠಾಣೆ ಉಪನಿರೀಕ್ಷಕ ಸಂತೋಷ್ ಬಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲ ರಂಗಯ್ಯ, ಮಹೇಶ್ ಮೇನಾಲ, ಪದ್ಮನಾಭ ಜೈನ್, ಯೋಗಗುರು ಗಣಪಯ್ಯ ಭಟ್,ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ,ಶಿಬಿರಾಧಿಕಾರಿ ನಂದಕುಮಾರ್,ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಆನಂದ ಗೌಡ ಪೆರಿಯಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ,ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯದ ಮೇಲ್ವಿಚಾರಕಿ ಶ್ರೀಮತಿ ವಿಶಾಲ ಕೆ.ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.