ಅಗಲಿದ ಚೇತನ ಕೂರತ್ ತಂಞಳ್ ರವರಿಗೆ ಗಾಂಧಿನಗರ ಮದ್ರಸ ಆಶ್ರಯದಲ್ಲಿ ಯಾಸೀನ್, ತಹ್ಲೀಲ್, ದುವಾ ಸಂಗಮ

0

ತಂಙಳ್ ರವರ ಜೀವನ ಎಲ್ಲರಿಗೂ ಮಾದರಿ:ಅಶ್ರಫ್ ಖಾಮಿಲ್ ಸಖಾಫಿ

ಅಗಲಿದ ಉಳ್ಳಾಲ, ಸುಳ್ಯ ಸೇರಿದಂತೆ ನೂರಾರು ಮೊಹಲ್ಲಾ ಗಳ ಖಾಝಿ, ದಕ್ಷಿಣ ಭಾರತದ ಪ್ರಾತ ಸ್ಮರಣೀಯ ವಿಧ್ವಾoಸರಾದ ಖುರ್ರತುಸ್ಸಾ ದಾತ್ ಮರ್ಹೂಂ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ರವರಿಗೆ ಸುಳ್ಯ ಗಾಂಧಿನಗರ ಮೂಹಿಯದ್ದೀನ್ ಜುಮಾ ಮಸ್ಜಿದ್ ಅದೀನದ ಮುನವ್ವಿರುಲ್ ಮದರಸ
ವತಿಯಿಂದ ಯಾಸೀನ್ ಪಾರಾಯಣ,ತಹ್ಲೀಲ್, ಧುವಾ ಸಂಗಮ ಏರ್ಪಡಿಸಲಾಗಿತ್ತು
ಮದ್ರಸ ಮುಖ್ಯ ಶಿಕ್ಷಕರಾದ ಸಿರಾಜುದ್ದೀನ್ ಸಖಾಫಿ ಉದ್ಘಾಟಿಸಿದರು.

ಎಂಜೆಎಂ ಖತೀಬರಾದ
ಅಲ್ ಹಾಜ್ ಅಶ್ರಫ್ ಖಾಮಿಲ್ ಖಾಝಿ ಯವರ ಅನುಸ್ಮರಣೆ ಮಾಡಿ ಇಡೀ ಬದುಕನ್ನು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ರೂಪಿಸಿಕೊಂಡ ತಂಙಳ್ ರವರು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲವನ್ನು ಮೀರಿ ಮಾನವೀಯತೆ ಮೆರೆದು ಕೂರ ಎಂಬ ಹಳ್ಳಿ ಗಾಡನ್ನು ಸಮೃದ್ಧ ಗೊಳಿಸಿ ಎಲ್ಲರ ಪ್ರೀತಿ ವಿಶ್ವಾಸ ಕ್ಕೆ ಪಾತ್ರ ರಾಗಿರುವುದು ಅವಿಸ್ಮರಣೀಯ ಅವರ ಮರಣಾನಂತರ ಜನರು ತೋರಿದ ಗೌರವವೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಗಾಂಧಿನಗರ ಜಮಾ ಅತ್ ಅಧ್ಯಕ್ಷ ಹಾಜಿ ಕೆ. ಎಂ ಮಹಮ್ಮದ್ ಕೆಎಂಎಸ್, ಮಾಜಿ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಮದ್ರಸ ಉಸ್ತುವಾರಿ ನಿರ್ದೇಶಕರು ಗಳಾದ ಕೆ. ಬಿ. ಅಬ್ದುಲ್ ಮಜೀದ್, ಹಾಜಿ ಎಸ್. ಎ. ಹಮೀದ್, ಹಾಜಿ ಐ. ಇಸ್ಮಾಯಿಲ್, ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಅಜಾದ್ ಉಪಸ್ಥಿತರಿದ್ದರು.