ಏಷ್ಯನ್ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ನಲ್ಲಿ ಆದ್ಯ ಎಸ್ ನಾಯಕ್ ಗೆ ಮೂರನೇ ಸ್ಥಾನ

0

ಮೈಸೂರಿನ ಆಚಾರ್ಯ ವಿದ್ಯಾಕುಲದಲ್ಲಿ 7ನೇ ತರಗತಿಯಲ್ಲಿ ವ್ಯಾಸoಗ ಮಾಡುತ್ತಿರುವ ಆದ್ಯ ಎಸ್ ನಾಯಕ್ ಜೂನ್ 26 ಮತ್ತು 27ರಂದು ದುಬೈಯಲ್ಲಿ ನಡೆದ
ಏಷ್ಯನ್ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ನ ಸಾಂಪ್ರದಾಯಕ ಯೋಗಾಸನ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾಳೆ.

ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಮರ್ಕಂಜ ಗ್ರಾಮದ ತೋಟಚಾವಡಿ ಮನೆಯ ಸುಧಾಕರ್ ನಾಯಕ್ ಮತ್ತು ಅಕ್ಷಯ ನಾಯಕ್ ರವರ ಪುತ್ರಿಯಾಗಿರುವ ಈಕೆ ಮೈಸೂರಿನ ಎಂ.ವಿ ಯೋಗ ಸಂಸ್ಥೆಯ ತರಬೇತುದಾರ ಮತ್ತು ಅಧ್ಯಕ್ಷ ಡಾ. ಗಣೇಶ ಕುಮಾರ್ ರವರ ಶಿಷ್ಯೆ.