ಕೂರತ್ ತಂಙಳ್ ಸುಪುತ್ರ ಬಹು | ಅಸ್ಸಯ್ಯದ್ ಅಬ್ದುಲ್ ರಹಮಾನ್ ಮಸೂದ್ ಅಲ್ ಅಝರಿ ಅಲ್ ಮುಈನಿ ತಂಙಳ್ ಜಟ್ಟಿಪಳ್ಳಕ್ಕೆ
ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಇದರ ವತಿಯಿಂದ ಇಂದು ಇಶಾ ನಮಾಝ್ ಬಳಿಕ ಜಟ್ಟಿಪಳ್ಳ ಮಸೀದಿಯಲ್ಲಿ ಬಹು ಅಸ್ಸೆಯ್ಯದ್ ಯು ಎಸ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ಇವರ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ಹಾಗೂ ಜುಲೈ 8 ರಂದು ನಿಧನರಾದ ಖುರತುಸ್ಸಾದಾತ್ ಸಯ್ಯದ್ ಪಝಲ್ ಕೊಯಮ್ಮ ತಂಙಳ್ ಕೂರತ್ ರವರ ಅನುಸ್ಮರಣೆ ಮತ್ತು ತಹಲೀಲ್ ಕಾರ್ಯಕ್ರಮ ಜು.11 ರಂದು ನಡೆಯಲಿದೆ.















ಅನುಸ್ಮರಣೆ ಮತ್ತು ತಹಲೀಲ್ ಕಾರ್ಯಕ್ರಮಕ್ಕೆ ಕೂರತ್ ತಂಙಳ್ ರವರ ಸುಪುತ್ರ ಬಹು | ಅಸ್ಸಯ್ಯದ್ ಅಬ್ದುಲ್ ರಹಮಾನ್ ಮಸೂದ್ ಅಲ್ ಅಝರಿ ಅಲ್ ಮುಈನಿತಂಙಳ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಮಹಮ್ಮದ್ ಆಲಿ ಸಖಾಫಿ ಉದ್ಘಾಟಿಸಲಿದ್ದಾರೆ. ಅನುಸ್ಮರಣೆ ಪ್ರಭಾಷಣ ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮಾಡಲಿದ್ದಾರೆ. ಜಲಾಲೀಯ್ಯ ರಾತೀಬ್ ನ್ನು ಜಟ್ಟಿಪಳ್ಳ ಮಸೀದಿ ಇಮಾಮ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮತ್ತು ಸಿರಾಜುದ್ದೀನ್ ಸಹದಿ ನಡೆಸಿಕೊಡಲಿದ್ದಾರೆ.
ಜು.10 ರಂದು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಸದಸ್ಯರು ಕೂರತ್ ತಂಙಳ್ ಸುಪುತ್ರ ರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಎನ್ ಎ ಅಬ್ಬುಲ್ಲ, ಶರೀಫ್ ಜಟ್ಟಿಪಳ್ಳ, ಲತೀಫ್ ಸಖಾಫಿ ಗೂನ್ನಡ್ಕ, ಬಿ ಯಮ್ ಮಹಮ್ಮದ್, ಫೈಸಲ್(ಪೈಚು) ಜೆಟಿಪಿ ಭೇಟಿಯಾಗಿದ್ದರು









