ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ ದಶಮಾನೋತ್ಸವ‌ ವಿಶೇಷ ಕಾರ್ಯಕ್ರಮ

0

ಕ್ರೀಡೆಯ ಜೊತೆಗೆ ಯಕ್ಷಗಾನಕ್ಕೂ ಪ್ರೋತ್ಸಾಹ ನೀಡಿ: ಜಬ್ಬಾರ್ ಸುಮೊ

ಸುಳ್ಯ, ಜು.೧೩: ಕ್ರೀಡೆ ಎಂಬುದು ಯಾವುದೇ ಜಾತಿ, ಧರ್ಮ, ಬೇಧ-ಭಾವ ಇಲ್ಲದೇ ನಡೆಯುವ ಕಾರ್ಯಕ್ರಮವಾಗಿದ್ದು, ಕ್ರೀಡಾ ಸಂಘಟನೆ ಹಾಗೂ ಕ್ರೀಡೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಹಾಗೂ ಸಾಮರಸ್ಯ ಬೆಳೆಯಲು ಸಾಧ್ಯ ಎಂದು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೆ.ಆರ್. ಹೇಳಿದರು.
ಅವರು ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ (ಎಂ.ಸಿ.ಸಿ.) ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣ ನೆರವೇರಿಸಿದರು.


ಕ್ರೀಡೆ ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನೀಡುವ ಮೂಲಕ ನಮ್ಮಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಶಿಸ್ತು, ನಿಯಮದ ಚೌಕಟ್ಟಿನಿಂದ ಇರುವ ಸಂಘಟನೆಗಳು ಯಶಸ್ವಿಯಾಗಲು ಸಾಧ್ಯ ಎಂದ ಅವರು ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಕಳೆದ ಹತ್ತು ವರ್ಷದಲ್ಲಿ ಮಾಡಿದ ಸಾಧನೆ, ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆ ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ, ಪ್ರತಿಭೆಗಳನ್ನು ಬೆಳಗಲು ಪೂರಕವಾಗಲಿದೆ. ಸಂಘ ಸಂಸ್ಥೆಗಳು ಊರಿನ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೂ ಕೈಜೋಡಿಸುವ ಕೆಲಸಗಳು ಆಗಲಿ ಎಂದರು.
ಸುಳ್ಯ ಎಂ.ಸಿ.ಸಿ. ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ ಕಾರ್ಯಕ್ರಮ ಉದ್ಘಾಟಿಸಿದರು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ, ಎಂಸಿಸಿ ಗೌರವಾಧ್ಯಕ್ಷ ಗಿರೀಶ್ ಅಡ್ಪಂಗಾಯ, ಎಂಸಿಸಿ ಸಂಚಾಲಕ ರಾಜೇಶ್ ರೈ, ಪ್ರಧಾನ ಕಾರ‍್ಯದರ್ಶಿ ಜುಬೇರ್, ಸಂಚಾಲಕ ಸಂತೋಷ್ ಶೆಟ್ಟಿ,ಸ್ಥಾಪಕ ಅಧ್ಯಕ್ಷ ಹಂಝ ಕಾತೂನ್, ಎಂ.ಬಿ.ಫೌಂಡೇಶನ್‌ನ ಸಂಚಾಲಕಿ ಹರಿಣಿ ಸದಾಶಿವ, ಟ್ರಸ್ಟಿಗಳಾದ ಪುಷ್ಪರಾಧಕೃಷ್ಣ, ಶರೀಫ್ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ರವಿಕುಮಾರ್ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ, ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರ ಮಜೀದ್ ಸುಳ್ಯ, ರಾಷ್ಟçಮಟ್ಟದ ಕಬಡ್ಡಿ ಆಟಗಾರರಾದ ಕಿಶನ್ ದ್ರಾವಿಡ್, ಹೇಮಂತ್ ಕೆ.ವಿ.ಉದ್ಯಮಿ ಶಾಫಿ ಪಾರೆ ಹಾಗೂ ಎಂ.ಸಿ.ಸಿ. ದಿಗ್ಗಜರನ್ನು ಅತಿಥಿಗಳು ಸಮ್ಮಾನಿಸಿ, ಗೌರವಿಸಿದರು.
ಯಕ್ಷಗಾನ ಕಲಾವಿದ ಜಬ್ಬಾರ್ ಸುಮೋ ಸನ್ಮಾನ ಸ್ವೀಕರಿಸಿ ಒಂದು ಕ್ರಿಕೆಟ್ ಕ್ಲಬ್ ದಶಮಾನೋತ್ಸವ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಸಾಂದೀಪ್ ಶಾಲೆಯ ದೇವರ ಮಕ್ಕಳ ಜೊತೆ ಆಚರಿಸಿದು ಬಹಳ ಅರ್ಥಪೂರ್ಣ ಕಾರ್ಯಕ್ರಮ ನೀವು ಕ್ರೀಡೆಯ ಜೊತೆ ಯಕ್ಷಗಾನಕ್ಕೂ‌ ಪ್ರೋತ್ಸಾಹ ನೀಡಿ ಯಕ್ಷಗಾನವನ್ನು ಬೆಳಸಲು ಸಹಕಾರಿಯಾಗಬೇಕು ಎಂದರು.
ಕಾರ್ಯಕ್ರಮದ ನಂತರ ವಿಶೇಷ ಮಕ್ಕಳ ಜೊತೆ ಸಹಬೋಜನ ಏರ್ಪಡಿಸಲಾಗಿತ್ತು.