ದೇವಚಳ್ಳ :ಸಹಾಯಧನ ವಿತರಣೆ

0

ದೇವಚಳ್ಳ ಗ್ರಾಮದ ನೆಲ್ಲೂರು ಕೆಮ್ರಾಜೆ, ದೇವ ಎಂಬಲ್ಲಿ ವಾಸವಾಗಿರುವ ಲೀಲಾವತಿ ಎಂಬವರು ಸುಮಾರು 25 ವರುಷ ಗಳಿಂದ ಒಬ್ಬಂಟಿಯಾಗಿದ್ದು ವಾಸಿಸುತ್ತಿದ್ದರು. ಇವರ ಮನೆ ಬೀಳುವ ಪರಿಸ್ಥಿಯಲ್ಲಿತ್ತು. ಇವರ ಮಗ ಹೊಸ ಮನೆ ರಚನೆಗಾಗಿ ಕೆಲಸ ಪ್ರಾರಂಭಿಸಿದ್ದು ಇವರ ಮಗ ಮರಣ ಹೊಂದಿದ ಕಾರಣ ಕೆಲಸ ಅರ್ಧದಲ್ಲಿ ನಿಂತಿತ್ತು .ಇದನ್ನು ಗ್ರಾಮ ಪಂಚಾಯತ್ ,ಊರವರು ಸಹಕಾರದೊಂದಿಗೆ ಮತ್ತೆ ಕೆಲಸವನ್ನು ಪ್ರಾರಂಭಿಸಲಾಯಿತು. ಈ ಮನೆಯ ರಚನೆಯ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸಂಪಾಜೆ ವಲಯ ಇದರ ಸದಸ್ಯರು ಶ್ರಮದಾನ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೂ10,000 ಸಹಾಯಧನವನ್ನು ಜು.10ರಂದು ಆಸರೆ ನಿಲಯ ಗೃಹಪ್ರವೇಶ ದಂದು ಮರ್ಕಂಜ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ, ಕಾರ್ಯದರ್ಶಿ ನವೀನ, ಗೋಳಿಯಡ್ಕ ಒಕ್ಕೂಟದ ಅಧ್ಯಕ್ಷರಾದ ರಾಧಾಕೃಷ್ಣ ,ನಿಕಟಪೂರ್ವ ಅಧ್ಯಕ್ಷರಾದ ನಯನಕುಮಾರ ಜೈನ್ ಮತ್ತು ನಾರಾಯಣಗೌಡ ಪಾನತ್ತಿಲ್ಲ ,ವಲಯ ಮೇಲ್ವಿಚಾರಕರಾದ ಗಂಗಾಧರ, ಮರ್ಕಂಜ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೋಹಿಣಿ ಮರ್ಕಂಜ ಸಿ ಎಸ್ ಸಿ ಕೇಂದ್ರದ ವಿಎಲ್ಇ ಪಾವನ, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಕುಮುದಾ ಸ್ಥಳೀಯರಾದ ಲೋಹಿತ್ ಹಾಗೂ ರೋಹಿತ್, ಸ್ಥಳೀಯ ಸಂಘದ ಸದಸ್ಯರು ಉಪಸ್ಥಿತಿಯಲ್ಲಿ‌‌ ವಿತರಿಸಲಾಯಿತು.