ಸುಳ್ಯ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ‌ ಶಿವರಾಮ್ ಎಂ.ಎಸ್. ಆಯ್ಕೆ

0


ಸುಳ್ಯ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಸಭೆಯು ಜು.14 ರಂದು ಜರುಗಿ‌ತು.ಮುಂದಿನ ಅವಧಿಗೆ (2024-2025) ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಶಿವರಾಮ್ ಎಂ.ಎಸ್ (ಎಸ್.ವಿ .ಎಂ. ಮೆಡಿಕಲ್ಸ್ ಸುಳ್ಯ), ಉಪಾಧ್ಯಕ್ಷರಾಗಿ ಬಿ. ಸೂರ್ಯನಾರಾಯಣ (ಅರುಣ ಮೆಡಿಕಲ್ಸ್ ಬೆಳ್ಳಾರೆ),
ಕಾರ್ಯದರ್ಶಿಯಾಗಿ ಟಿ.ಕೆ.ತೀರ್ಥರಾಮ (ಆದರ್ಶ್ ಮೆಡಿಕಲ್ಸ್ ಕಲ್ಲುಗುಂಡಿ ಸಂಪಾಜೆ),
ಕೋಶಾಧಿಕಾರಿಯಾಗಿ ಅರುಣ ಕುಮಾರ್ ಎನ್. (ಮಂಜೂಷ ಮೆಡಿಕಲ್ಸ್ ಸುಳ್ಯ),
ಜೊತೆ ಕಾರ್ಯದರ್ಶಿಯಾಗಿ ಹರಿ ಚರಣ್ (ಮಾಸ್ಟರ್ ಮೆಡಿಕಲ್ಸ್ ಸುಳ್ಯ) ಇವರನ್ನು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.