ಕುಕ್ಕುಜಡ್ಕ- ಪೈಲಾರು ರಸ್ತೆಯ ಮೇಲೆ ಬಾಗಿದ ಬೃಹತ್ ಗಾತ್ರದ ಅಪಾಯಕಾರಿ ಮರ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಿಂದ ಪೈಲಾರು ಕಡೆಗೆ ಹೋಗುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಸಂಪೂರ್ಣವಾಗಿ ರಸ್ತೆಯ ಮೇಲೆ ಬಾಗಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.


ಇದೀಗ ವಿಪರೀತ ಮಳೆ ಸುರಿಯುವ ಕಾರಣಕ್ಕೆ ಮುರಿದು ಬೀಳುವ ಹಂತದಲ್ಲಿದೆ. ಮರದಡಿಯಲ್ಲಿ
ವಿದ್ಯುತ್ ಲೈನ್ ಹಾದುಹೋಗಿರುವುದರಿಂದ ಮರ ಬಿದ್ದಲ್ಲಿ ವಿದ್ಯುತ್ ಕಂಬಗಳು ಹಾನಿಗೀಡಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು ಸ್ಥಳೀಯ ರುಆತಂಕಕ್ಕೀಡಾಗಿದ್ದಾರೆ. ಸಂಬಂಧಿಸಿದ ಇಲಾಖೆಯವರು ಮರ ತೆರವುಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗ ಬೇಕಾಗಿದೆ.