ಒಂದೇ ಠಾಣೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಪೊಲೀಸರ ವರ್ಗಾವಣೆ ಆದೇಶ

0

ಸುಳ್ಯ ವೃತ್ತ ನಿರೀಕ್ಷಕ್ಕೆ ಸಂಬಂಧಿಸಿದ 40 ಕ್ಕೂ ಹೆಚ್ಚು ಪೊಲೀಸರ ವರ್ಗಾವಣೆ ಪ್ರಕ್ರಿಯೆ

ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದ್ದು, ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ವೃತ ನಿರೀಕ್ಷಕ ವ್ಯಾಪ್ತಿಯ ಸುಮಾರು ೪೦ಕ್ಕೂ ಹೆಚ್ಚು ಪೊಲೀಸರ ಕೌನ್ಸಿಲಿಂಗ್ ಇಂದು ಮಂಗಳೂರು ಎಸ್ಪಿ ಕಚೇರಿಯಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.


ಇದಕ್ಕಾಗಿ ಸುಳ್ಯ ಠಾಣೆಯಿಂದ 1ಎ ಎಸ್ ಐ, 6 ಹೆಡ್ ಕಾನ್ಸ್ಟೇಬಲ್, 10 ಪೊಲೀಸ್ ಸಿಬ್ಬಂದಿಗಳು, ಬೆಳ್ಳಾರೆ ಠಾಣೆ ಯಿಂದ 5 ಹೆಡ್ ಕಾಂಸ್ಟೇಬಲ್, 8 ಪಿಸಿ ಗಳು ಸುಬ್ರಹ್ಮಣ್ಯ ಠಾಣೆಯಿಂದ 1 ಎ ಎಸ್ ಐ, ಮೂವರು ಹೆಡ್‌ಕಾನ್‌ಸ್ಟೇಬಲ್, ಆರು ಪೊಲೀಸ್ ಸಿಬ್ಬಂದಿಗಳು ತೆರಳಿರುವುದಾಗಿ ತಿಳಿದುಬಂದಿದೆ.


ಜಿಲ್ಲೆಯಲ್ಲಿ ಒಟ್ಟು 198 ಮಂದಿ ಪೊಲೀಸರು ಈ ಪ್ರಕ್ರಿಯೆ ಮೂಲಕ ವರ್ಗಾವಣೆಗೊಳ್ಳಲಿದ್ದಾರೆ ಎನ್ನಲಾಗಿದೆ.


ಎಸ್ ಪಿ ಕಚೇರಿಯಲ್ಲಿ ಎಲ್‌ಇಡಿ ಪರದೆ ಮೂಲಕ ಹುದ್ದೆ ಖಾಲಿ ಇರುವ ಠಾಣೆಗಳ ವಿವರವನ್ನು ನೀಡಿ ಸ್ಥಳಗಳ ಬಗ್ಗೆ ಹಿರಿಯ ಅಧಿಕಾರಿಗಳು ವರ್ಗಾವಣೆಗೊಳ್ಳಲಿರುವ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ನಡೆಸುತ್ತಾರೆ ಎಂದು ತಿಳಿದು ಬಂದಿದೆ.