ಮೊಬೈಲ್ ನಿಂದ ದೂರವಿರಿ, ಶಿಬಿರದಲ್ಲಿ ರೂಢಿಸಿಕೊಂಡ ಚಟುವಟಿಕೆಗಳನ್ನು ಮುಂದುವರಿಸಿ: ಅಶೋಕ್ ಕುಮಾರ್ ಮೂಲೆಮಜಲು
ಕೌಸ್ತುಭ ಕಲಾ ಟ್ರಸ್ಟ್ ಕೂಜುಗೋಡು ಸುಬ್ರಹ್ಮಣ್ಯ ಇವರು ಆಯೋಜಿಸಿರುವ”ಕಲರವ” ಮಕ್ಕಳ ಬೇಸಿಗೆ ಶಿಬಿರ ಏ. 11 ರಂದು ಸಂಪನ್ನಗೊಂಡಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಅಶೋಕ್ ಕುಮಾರ್ ಮೂಲೆಮಜಲು ಅವರು ಇಂದಿನ ಮಕ್ಕಳು ಮೊಬೈಲ್ ನಿಂದ ದೂರವಿರಲು ಇಂತಹ ಬೇಸಿಗೆ ಶಿಬಿರಗಳು ಬಹಳ ಅನುಕೂಲಕರ , ಶಿಬಿರದಲ್ಲಿ ರೂಢಿಸಿಕೊಂಡ ಚಟುವಟಿಕೆಗಳನ್ನು ಮುಂದುವರಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅಧ್ಯಕ್ಷತೆಯನ್ನು ವಹಿಸಿ ಪ್ರಸ್ತುತ ದಿನಗಳಲ್ಲಿ ಇಂತಹ ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಸದಾವಕಾಶ ಎಂದು ತಿಳಿಸಿದರು. ವೇದಿಕೆಯಲ್ಲಿ ಹರಿಹರ ಪಲ್ಲತಡ್ಕ ಗ್ರಾ.ಪಂ ಸದಸ್ಯ ವಿಜಯ ಅಂಙಣ, ಕೃಷ್ಣಕುಮಾರ್ ಬಾಳುಗೋಡು, ಶಿಬಿರ ಸಂಯೋಜಕಿ ಶ್ರೀಮತಿ ವನಿತಾ ಉದಯ್ ಕೂಜುಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಕು. ಗೌರವಿ ಗಂಗಾ ಸ್ವಾಗತಿಸಿ ,ಕು. ಸಾಧ್ವಿ ಪ್ರಸಾದ್ ವಂದಿಸಿದರು. ಮಾ.ಮನ್ವಿತ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳ ಮನೋರಂಜನಾ ಕಾರ್ಯಕ್ರಮದೊಂದಿಗೆ ಶಿಬಿರ ಸಂಪನ್ನಗೊಂಡಿತು.