ಸಂಪಾಜೆ – ಮಡಿಕೇರಿ ರಸ್ತೆ ಸಂಚಾರ ನಿರ್ಬಂಧ ಹಿಂಪಡೆದ ಕೊಡಗು ಜಿಲ್ಲಾಡಳಿತ

0

ಭಾರೀ ಮಳೆಯ ಹಿನ್ನೆಲೆಯಲ್ಲಿ ಮದೆನಾಡಿನ ಕರ್ತೋಜಿ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡು, ಗುಡ್ಡ ಕುಸಿಯುವ ಆತಂಕದಿಂದ ಕಳೆದ ಐದು ದಿನಗಳಿಂದ ಸಂಪಾಜೆ – ಮಡಿಕೇರಿ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ತಡೆ ನೀಡಿದ್ದ ಕೊಡಗು ಜಿಲ್ಲಾಡಳಿತ ನಿರ್ಬಂಧವನ್ನು ಹಿಂಪಡೆದಿದ್ದು, ಇಂದು ರಾತ್ರಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಾಗಿ ತಿಳಿದುಬಂದಿದೆ.

ಗುಡ್ಡ ಕುಸಿಯುವ ಭೀತಿಯಿಂದ ಜು.18ರಂದು ರಾತ್ರಿಯಿಂದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರು ಸಂಪಾಜೆ – ಮಡಿಕೇರಿ ರಸ್ತೆಯಲ್ಲಿ ದ್ವಿಚಕ್ರ ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದೀಗ ಅಲ್ಪ ಮಳೆ ಕಡೆಮೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಮತ್ತೆ ಅವಕಾಶ ಮಾಡಲಾಗಿದ್ದು, ಇಂದು ರಾತ್ರಿಯಿಂದ ವಾಹನ ಸಂಚಾರ ಯಥಾವತ್ತಾಗಿ ನಡೆಯಲಿದೆ.