ಸುಳ್ಯ ಸ್ನೇಹ ಶಾಲೆಯಲ್ಲಿ ಕವಿಗೋಷ್ಠಿ

0

“ಶಾಲೆಗಳಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುವುದು ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಸಹಾಯವಾಗುತ್ತದೆ. ಮಾತೃ ಭಾಷೆಯಲ್ಲಿ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವಷ್ಟು ಸುಲಭವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಾಧ್ಯವಿಲ್ಲ. ಹಾಗಾಗಿ ಹೃದ್ಯವಾದ ಸಾಹಿತ್ಯ ರಚನೆಗೆ ಕನ್ನಡ ಮಾಧ್ಯಮವೇ ಸೂಕ್ತ. ಭಾಷೆಯು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಸ್ನೇಹ ಶಾಲೆಯು ಪ್ರತ್ಯಕ್ಷ ಸಾಕ್ಷಿ. ಇಲ್ಲಿಯ ಸಮೃದ್ಧ ಪರಿಸರ ಉಲ್ಲಸಿತವಾಗಿದ್ದು ಚೆತೋಹಾರಿಯಾಗಿದೆ. ಇಲ್ಲಿಯ ಮುಕ್ತ ಪರಿಸರದಲ್ಲಿ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ” ಎಂಬುದಾಗಿ ಸುಳ್ಯ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಕೋಡಿಬೈಲ್ ಅವರು ಹೇಳಿದರು.

ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜು.23 ರಂದು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಎಮ್. ಜಿ. ಕಾವೇರಮ್ಮ ಇವರ 85ನೇ ಜನ್ಮ ದಿನಾಚರಣಿ ಅಂಗವಾಗಿ ಆಯೋಜಿಸಲಾದ
ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ನೇಹ ಶಾಲಾ ವಿದ್ಯಾರ್ಥಿಗಳ ಸಾಹಿತ್ಯ ಸಾಮರ್ಥ್ಯವನ್ನು ಕೊಂಡಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸ್ನೇಹ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸ್ನೇಹ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಿರಂತರ ಪ್ರೋತ್ಸಾಹಿಸಲಾಗುತ್ತಿದೆ.


ಓದಲು ಕುತೂಹಲದೊಂದಿಗೆ ಆಸಕ್ತಿಯು ಅಗತ್ಯ” ಎಂದು ಹೇಳಿದರು .


ಹಿರಿಯ ಸಾಹಿತಿ ಎಮ್. ಜಿ. ಕಾವೇರಮ್ಮ ಇವರ ಸಾಹಿತ್ಯ ಸೇವೆಯನ್ನು ಚು. ಸಾ. ಪರಿಷತ್ತಿನ ಕಾರ್ಯದರ್ಶಿ ಉದಯ ಭಾಸ್ಕರ್ ವಿವರಿಸಿದರು.


ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಕಥೆ, ಕವನ , ಚುಟುಕುಗಳನ್ನು ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಶ್ರೀಮತಿ ಅನುರಾಧ ಉಬರಡ್ಕ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ವಿದ್ಯುಲತ ಪಿ.ಎನ್. ಸ್ವಾಗತಿಸಿ ಸಂಜನಾ ಪಿ.ಎಸ್. ವಂದಿಸಿದರು. ಚರಿತ ಬಿ.ಜೆ. ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.