ಪಂಜದಲ್ಲಿ ತಾಲೂಕು ಮಟ್ಟದ ಆಟಿ ಸಂಭ್ರಮ-ಸಮರೋಪ, ವಿಶೇಷ ಆಕರ್ಷಣೆಯಾದ ಆಟಿ ಕಳೆಂಜ, ವಿವಿಧ ಸ್ಪರ್ಧೆಗಳು

0

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ ) ಸುಳ್ಯ ಹಾಗೂ ವನಿತಾ ಸಮಾಜ (ರಿ) ಪಂಜ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಆಟಿ ಸಂಭ್ರಮ-2024 ಪಂಜ ವನಿತಾ ಸಮಾಜದಲ್ಲಿ ಜು.23 ರಂದು ನಡೆಯಿತು.

ವಿಶೇಷವಾಗಿ ಅಟಿ ಕಳೆಂಜ ಪ್ರದರ್ಶನ,ವಿವಿಧ ಸ್ಪರ್ಧೆಗಳೊಂದಿಗೆ ಹಾಗೂ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳು , ಭೋಜನದೊಂದಿಗೆ ಸಂಭ್ರಮದಿಂದ ನಡೆಯಿತು.

ಸಂಜೆ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಪದ್ಮಾವತಿ ಬಹುಮಾನ ವಿತರಣೆ ಮಾಡಿದರು.
ಪಂಜ ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು.
ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಅನಿತಾ ಸುತ್ತುಕೋಟೆ, ವನಿತಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪ ಡಿ ಪ್ರಸಾದ್ ಕಾನತ್ತೂರ್, ಕಾರ್ಯದರ್ಶಿ ಪವಿತ್ರಾ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಸವಿತಾರ ಮುಡೂರು ಸ್ವಾಗತಿಸಿದರು. ಶ್ರೀಮತಿ ಸುಮಾ ಕುದ್ವ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಶ್ರೀಮತಿ ಪವಿತ್ರ ಕುದ್ವ ವಂದಿಸಿದರು.