ಆಲೆಟ್ಟಿ ಗ್ರಾಮ ಪಂಚಾಯತ್ ಇದರ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ
ಪಂಚಾಯತ್ ಸಭಾಭವನದಲ್ಲಿ ಜು.25 ರಂದು ನಡೆಯಿತು.
ನೊಡೆಲ್ ಅಧಿಕಾರಿ ಹಿರಿಯ ಸಹಾಯಕಿ ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಸುಹಾನ ರವರು ಸಭೆಯ ಕಲಾಪವನ್ನು ನಡೆಸಿದರು.
ಮಾಣಿಮರ್ದು ಭಾಗದಲ್ಲಿ ಮೋರಿ ನಿರ್ಮಿಸಿಕೊಡುವ ಕಳೆದ ಗ್ರಾಮ ಸಭೆಯಲ್ಲಿ ಪಂಚಾಯತ್ ವತಿಯಿಂದ ನಿರ್ಮಿಸಿಕೊಡುವ
ಬಗ್ಗೆ ಸದಸ್ಯರು ಒಪ್ಪಿಕೊಂಡಿದ್ದರು. ಈ ಬಗ್ಗೆ ಸದಸ್ಯರು ಉತ್ತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಮುಂದಿನ 20 ದಿನದೊಳಗೆ
ಅರಣ್ಯ ಇಲಾಖೆ ,
ಲೋಕೋಪಯೋಗಿ ಇಲಾಖೆಯವರೊಂದಿಗೆ ಮಾತುಕತೆ ನಡೆಸಿ ಪಂಚಾಯತ್ ವತಿಯಿಂದ ಮೂರು ಕಡೆ ಮೋರಿ ನಿರ್ಮಿಸುವುದಾಗಿ ಮತ್ತು ಕೋಡಂಬಾರೆಯ ಸೇತುವೆ ನಿರ್ಮಾಣದ ಕುರಿತು ದೂರು ಹೈಕೋರ್ಟ್ ಹೋಗಿರುವುದರಿಂದ ಮಾಡಲು ಬರುವುದಿಲ್ಲ ಎಂದು ಪಿ.ಡಿ.ಒ ತಿಳಿಸಿದರು.
ಅರಂಬೂರು ಮಜಿಗುಂಡಿ ಊರ್ಜಿತದಲ್ಲಿರುವ ಪಂಚಾಯತ್ ರಸ್ತೆ ಪೋಲಿಸ್ ರಕ್ಷಣೆ ಪಡೆದು ಅಭಿವೃದ್ಧಿ ಪಡಿಸಬೇಕು. ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಪಿ.ಡಿ.ಒ ತಿಳಿಸಿದರು.
ಮನೆ ಕಟ್ಟಡ ಕಟ್ಟಲು ಬೇಕಾಗಿರುವ ಕಲ್ಲು ಸಿಗುತ್ತಿದೆ. ಮರಳು ಸಿಗದೇ ಸಾಮಾನ್ಯ ಜನರಿಗೆ ತುಂಬಾ ಸಮಸ್ಯೆ ಎದುರಾಗಿದೆ.
ಸ್ಥಳೀಯ ಹೊಳೆಯಿಂದ ಮರಳು ತೆಗೆಯಲು ಪಂಚಾಯತ್ ನವರಿಗೆ ಅನುಮತಿ ನೀಡಲು ಸುತ್ತೋಲೆ ಹೊರಡಿಸುವಂತೆ ಆಗ್ರಹಿಸಿದರು.
ಕಲ್ಚೆರ್ಪೆ ಘನತ್ಯಾಜ್ಯ ಘಟಕವನ್ನು ನಗರ ವ್ಯಾಪ್ತಿಯಲ್ಲಿರುವ
ಜಾಗ ಗುರುತಿಸಿ ವರ್ಗಾಯಿಸಬೇಕು. ಈಗಾಗಲೇ ತ್ಯಾಜ್ಯ ತುಂಬಿ ತುಳುಕಿ ಹರಿದು ಪರಿಸರವನ್ನು ವ್ಯಾಪಿಸಿಕೊಂಡಿದೆ.
ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ಭೀತಿಯಲ್ಲಿ
ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಆರೋಪಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ಸದಸ್ಯರಾದ ಸತ್ಯ ಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ದಿನೇಶ್ ಕಣಕ್ಕೂರು, ಧರ್ಮಪಾಲ ಕೊಯಿಂಗಾಜೆ, ಸುದೇಶ್ ಅರಂಬೂರು, ರತೀಶನ್ ಅರಂಬೂರು, ಸತ್ಯ ಪ್ರಸಾದ್ ಗಬ್ಬಲ್ಕಜೆ, ಶಿವಾನಂದ ರಂಗತ್ತಮಲೆ, ಶಂಕರಿ ಕೊಲ್ಲರಮೂಲೆ, ಕುಸುಮ ಬಿಲ್ಲರಮಜಲು, ಗೀತಾ ಕೋಲ್ಚಾರು, ಮೀನಾಕ್ಷಿ ಕೆ, ಪುಷ್ಪಾವತಿ ಕೆ, ಅನಿತಾ ಎಸ್, ವೇದಾವತಿ ಎನ್.ಪಿ, ಭಾಗೀರಥಿ ಎಂ.ಜಿ, ಶಶಿಕಲಾ ದೋಣಿಮೂಲೆ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.