ಕೇಂದ್ರ ಸರ್ಕಾರದ ಅಧಿನ ಸಂಸ್ಥೆ ಅಲೀಮ್ಕೋ ದವರು ತಾಲೂಕಿನ ವಿಕಲಚೇತನ ಫಲಾನುಭವಿಗಳಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲು ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅರ್ಜಿಯನ್ನು ವಿಕಲಚೇತನ ಫಲಾನುಭವಿಗಳಿಂದ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಕಾರ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ವಹಿಸಿದ್ದರು.
ಅಲೀಮ್ಕೋ ಸಂಸ್ಥೆಯ ಅಧಿಕಾರಿಗಳು, ವೆನ್ಲಾಕ್ ನ ಡಿಡಿ ಆರ್ ಸಿ ಯ ಅಧಿಕಾರಿಗಳು ಹಾಜರಿದ್ದರು.
ತಾಲೂಕಿನ ಎಂ.ಆರ್.ಡಬ್ಲ್ಯೂ ಚಂದ್ರ ಶೇಖರ್ ಸ್ವಾಗತಿಸಿ, ನಗರ ಪಂಚಾಯತ್ ಯು.ಆರ್.ಡಬ್ಲ್ಯೂ ಪ್ರವೀಣ್ ನಾಯಕ್ ವಂದಿಸಿದರು.
ತಾಲೂಕಿನ ಎಲ್ಲ ವಿ.ಆರ್.ಡಬ್ಲ್ಯೂ ರವರು ಮತ್ತು ವಿಕಲಚೇತನ ಫಲಾನುಭವಿಗಳು ಮತ್ತು ಅವರ ಪೋಷಕರು ಹಾಜರಿದ್ದರು.