ಅರಂತೋಡು : ಸ್ವಸಹಾಯ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲೂಕಿನ ಸಂಪಾಜೆ ವಲಯದ ಹತ್ತು ಕಾರ್ಯಕ್ಷೇತ್ರದ 11 ಒಕ್ಕೂಟಗಳ ಪ್ರಗತಿ ಬಂದು ಸ್ವಸಹಾಯ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರವು ಅರಂತೋಡು ಗ್ರಾಮ ಪಂಚಾಯತ್ ನ ಅಮೃತಭವನದಲ್ಲಿ ಜು.24ರಂದು ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ದೇವಗೀತೆ ಮತ್ತು ಧ್ಯೇಯ ಗೀತೆ ಹಾಡಲಾಯಿತು.

ಕಾರ್ಯಕ್ರಮವನ್ನು ವಲಯದ ಮಾಜಿ ಅದ್ಯಕ್ಷರಾದ ಚಂದ್ರಶೇಖರ ನೆಡ್ಚಿಲ್ ದೀಪ ಬೆಳಗಿಸಿ ಉದ್ವಾಟಿಸಿದರು.

ಬಳಿಕ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ , ತಾಲೂಕಿನ ಯೋಜನಾಧಿಕಾರಿಗಳಾದ ಮಾಧವ ಗೌಡ, ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕಿ ಅನಿತಾರವರು ಉಪಸ್ಥಿತರಿದ್ದು ಯೋಜನೆ ನಡೆದು ಬಂದ ಹಾದಿ, ಒಕ್ಕೂಟದ ನಿರ್ವಹಣೆ , ಯೋಜನೆಯ ಬಡ್ಡಿ ಲೆಕ್ಕಾಚಾರ, ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ನಿತ್ಯಾನಂದ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ಗಂಗಾಧರ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು . ವಲಯದ ಎಲ್ಲಾ ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ತರಬೇತಿ ಪಡೆದುಕೊಂಡರು. ಈ ಸಂದರ್ಭ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅರಂತೋಡು ವಿ ಎಲ್ ಇ ಪುನೀತ್ ರವರು ಸಹಕರಿಸಿದರು.