ಜಾಲ್ಸೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುರಕ್ಷಾ ಸಹಾಯಧನ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಜಾಲ್ಸೂರು ಗ್ರಾಮದ ಸಮೃದ್ಧಿ ಸಂಘದ ಸದಸ್ಯೆ ಶ್ರೀಮತಿ ಹರ್ಷಿತ ಅವರ ಅತ್ತೆಯ ಅರೋಗ್ಯ ಸಮಸ್ಯಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ರೂ. 12000 ಮೊತ್ತದ ಧನಸಹಾಯವನ್ನು ಜಾಲ್ಸುರು ಒಕ್ಕೂಟದ ಅಧ್ಯಕ್ಷ ಗಣೇಶ್ ಅಂಬಾಡಿಮೂಲೆ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ವಲಯ ಮೇಲ್ವಿಚಾರಕ ತೀರ್ಥರಾಮ, ಸೇವಾಪ್ರತಿನಿಧಿ ಚಂದ್ರಕಲಾ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.