ಕೆವಿಜಿ ಐಪಿಎಸ್ ನಲ್ಲಿ ವಿಜೃಂಭಣೆಯ ‘ ಆಟಿಕೂಟ ‘

0
         ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜು.27 ರಂದು 'ಆಟಿ ಕೂಟ 'ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ  ಶಾಲಾ ಸಂಚಾಲಕರಾದ  ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಕೆ.ವಿ.ಜಿ ಆಡಳಿತ ಮಂಡಳಿಯ  ಕಮಿಟಿ 'ಬಿ 'ವಿಭಾಗದ ನಿರ್ದೇಶಕಿ  ಡಾ. ಜ್ಯೋತಿ ಆರ್ ಪ್ರಸಾದ್ ಶುಭ ಹಾರೈಸಿದರು.
 ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಬಳಿಕ ತುಳುನಾಡಿನ ಮಹತ್ವವನ್ನು ಸಾರುವ ಹಾಡು, ನೃತ್ಯ ದೊಂದಿಗೆ ವಿದ್ಯಾರ್ಥಿಗಳು ಮನರಂಜನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ' ಈ ಕಾರ್ಯಕ್ರಮವು ನಮ್ಮ ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು ತಿಳಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮ' ಎಂದರು.

ಬಳಿಕ ಮಾತನಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಆಟಿ ಕೂಟ ಕಾರ್ಯಕ್ರಮದಲ್ಲಿ ಮನೋರಂಜನೆಯನ್ನು ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಏಳನೇ ತರಗತಿಯ ವಿದ್ಯಾರ್ಥಿ ಯಶ್ ಆಟಿ ತಿಂಗಳ ವಿಶೇಷತೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ನೀಲಿ, ಹಳದಿ, ಕೆಂಪು ಮತ್ತು ಹಸಿರು ತಂಡದ ವಿದ್ಯಾರ್ಥಿಗಳು ಆಟಿಯಲ್ಲಿ ಮಾಡುವ ವಿವಿಧ ತಿಂಡಿ ತಿನಿಸುಗಳನ್ನು ತಂದು ಅವುಗಳನ್ನು ಆಟಿ ತಿಂಗಳಲ್ಲಿ ಮಾಡುವ ವಿಶೇಷತೆಯ ಕುರಿತು ವಿವರಿಸಿ ಶಿಕ್ಷಕರಿಗೆ ವಿತರಿಸಿದರು. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಆಟಿಯಲ್ಲಿ ತಿನ್ನುವ ತಿಂಡಿ ತಿನಿಸುಗಳ ಜೊತೆಗೆ ಹಳ್ಳಿಯ ಸೊಗಡಿನ ಆಟಗಳು ಹಾಗೂ ಆಟಿಯಲ್ಲಿ ಆಟಿ ಕೆಳೆಂಜ ಯಾಕೆ ಬರುತ್ತಾನೆ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಂಡರು.
ಈ ಕಾರ್ಯಕ್ರಮವನ್ನು ಏಳನೇ ತರಗತಿಯ ಶ್ರುತರಾಜ್ ಮತ್ತು ಶ್ರಾವ್ಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಯಶೋಧ ರಾಮಚಂದ್ರ, ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಸಿ.ಎ ಆಶೀಶ್ ಆನಂದ್ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಂದಾಳತ್ವವನ್ನು ಶಾಲೆಯ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞ ಡಿ.ಆರ್ ವಹಿಸಿಕೊಂಡಿದ್ದರು.