ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಚಂದ್ರಶೇಖರ ರೈ ಬಜನಿಯವರ ತಂಡದ ಅಧಿಕಾರ ಸ್ವೀಕಾರ

0

ಸಾಧಕರಿಗೆ ಸನ್ಮಾನ, ವಿವಿಧ ಕೊಡುಗೆಗಳ ಹಸ್ತಾಂತರ,ಸದಸ್ಯರ ಸೇರ್ಪಡೆ

‌ಬೆಳ್ಳಾರೆ ಟೌನ್ ರೋಟರಿ ಕ್ಲಬ್ಬಿನ 2024 – 25 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ರೊ| ಚಂದ್ರಶೇಖರ ರೈ ಬಜನಿ, ಕಾರ್ಯದರ್ಶಿ ರೊ| ಎ.ಕೆ. ಮಣಿಯಾಣಿ, ಕೋಶಾಧಿಕಾರಿ ರೊ| ಕೇಶವಮೂರ್ತಿಯವರ ತಂಡದ ಪದಗ್ರಹಣ ಕಾರ್ಯಕ್ರಮವು ಜು.27 ರಂದು ಬೆಳ್ಳಾರೆ ದೇವಿ ಹೈಟ್ಸ್ ನಲ್ಲಿ ನಡೆಯಿತು.

ರೋಟರಿ ಪೂರ್ವ ಜಿಲ್ಲಾ ಗವರ್ನರ್ ರೊ.ಎಸ್.ನಾಗಾರ್ಜುನ್ ಪದಪ್ರದಾನವನ್ನು ನೆರವೇರಿಸಿದರು.
ಬೆಳ್ಳಾರೆ ರೋಟರಿ ಕ್ಲಬ್ ನಿರಂತರವಾಗಿ ಹಲವಾರು ಕೊಡುಗೆಗಳನ್ನು ಸಮಾಜಕ್ಕೆ ನೀಡುವ ಮುಖಾಂತರ ಸಮಾಜಮುಖಿ ಕೆಲಸ ಮಾಡುತ್ತಿದೆ.ಒಂದು ರೀತಿಯ ಮ್ಯಾಜಿಕ್ ತರ ಕೆಲಸ ಮಾಡುತ್ತಿದೆ ಎಂದು ಹೇಳಿ ನೂತನ ತಂಡಕ್ಕೆ ಶುಭಹಾರೈಸಿದರು.
ರೊ.ಅಧ್ಯಕ್ಷ ಶಶಿಧರ ಬಿ.ಕೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು.ಪದಪ್ರದಾನ ಬಳಿಕ ನೂತನ ಅಧ್ಯಕ್ಷ ಚಂದ್ರಶೇಖರ ರೈಯವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.


ಸಾರ್ಜೆಂಟ್‌ ಅಟ್‌ ಆರ್ಮ್ಸ್‌ ಆಗಿ ರೊ| ಬಾಲಕೃಷ್ಣ ಮಡ್ತಿಲ, ಸಂಘ ಸೇವೆ ನಿರ್ದೇಶಕರಾಗಿ ರೊ| ರವೀಂದ್ರ ಗೌಡ, ವೃತ್ತಿ ಸೇವೆ ನಿರ್ದೇಶಕರಾಗಿ ರೊ|
ನಾಗೇಶ್‌ ಕುಲಾಲ್‌, ಸಮಾಜ ಸೇವೆ ನಿರ್ದೇಶಕರಾಗಿ ರೊ| ನವೀನ್‌ ಕುಮಾರ್‌ ರೈ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ರೊ| ಸತ್ಯನಾರಾಯಣ, ಯುವ ಸೇವೆ ನಿರ್ದೇಶಕರಾಗಿ ರೊ| ಪ್ರಸಾದ್‌, ಮೆಂಬರ್ಶಿಪ್‌ ಡೆವಲಪ್ಮೆಂಟ್‌ ಚೇರ್ಮೆನ್‌ ಆಗಿ ರೊ| ಪದ್ಮನಾಭ ಬೀಡು, ರೋಟರಿ ಫೌಂಡೇಶನ್‌ ಚೇರ್ಮೆನ್‌ ಆಗಿ ರೊ| ಪ್ರಭಾಕರ ಆಳ್ವ, ಪಬ್ಲಿಕ್‌ ಇಮೇಜ್‌ ಚೇರ್ಮೆನ್‌ ಆಗಿ ರೊ| ಕರುಣಾಕರ ಆಳ್ವ, ಡಿಸ್ಟ್ರಿಕ್ಟ್‌ ಪ್ರಾಜೆಕ್ಟ್‌ ಚೇರ್ಮೆನ್‌ ಆಗಿ ರೊ| ಆರಿಫ್‌, ಲರ್ನಿಂಗ್‌ ಫೆಸಿಲಿಟೇಟರ್‌ ಆಗಿ ರೊ| ಶ್ಯಾಮಸುಂದರ ರೈ ಅಧಿಕಾರ ಸ್ವೀಕರಿಸಿದರು.

ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಸಹಾಯಕ ಗವರ್ನರ್‌ ರೊ| ವಿನಯಕುಮಾರ್‌, ಝೋನಲ್‌ ಲೆಫ್ಟಿನೆಂಟ್‌ ರೊ| ವಿಶ್ವನಾಥ ನಡುತೋಟ ಹಾಗೂ ಸುಳ್ಯ ರೋಟರಿ ಕ್ಲಬ್‌ ಅಧ್ಯಕ್ಷೆ ರೊ| ಯೋಗಿತಾ ಗೋಪಿನಾಥ್‌, ಶ್ರೀಮತಿ ಸುವರ್ಣ ಚಂದ್ರಿಕಾ, ಶ್ರೀಮತಿ ಸುನಿತ ಬಿ. ಯವರು ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭಹಾರೈಸಿದರು.

ಸಾಧಕರಿಗೆ ಸನ್ಮಾನ
ಬೆಂಗಳೂರಿನಲ್ಲಿ ರಾಜ್ಯ ಗುಪ್ತವಾರ್ತೆ ವಿಭಾಗದಲ್ಲಿ ಎಸ್.ಪಿ.ಆಗಿ ಸೇವೆ ಸಲ್ಲಿಸುತ್ತಿರುವ ಜಗನ್ನಾಥ ರೈ ಬಜನಿ ದಂಪತಿ ಮತ್ತು ಅವರ ಮಾತೃಶ್ರೀ ಯವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರೊ.ಆರ್.ಎಸ್.ನಾಗಾರ್ಜುನ್ , ರೊ.ಪುರಂದರ ರೈ, ರೊ.ಶಶಿಧರ ಬಿ.ಕೆ.ದಂಪತಿ,ರೊ.ವಿಶ್ವನಾಥ ಕೆ.ರೊ.ಪದ್ಮನಾಭ ಬೀಡು ಇವರನ್ನು ಸನ್ಮಾನಿಸಲಾಯಿತು.

ಕೊಡುಗೆಗಳ ಹಸ್ತಾಂತರ
ದರ್ಖಾಸ್ತು ಅಂಗನವಾಡಿ ಕೇಂದ್ರಕ್ಕೆ ಗ್ಯಾಸ್ ಸ್ಟವ್, ಕಲ್ಲೋಣಿ ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಟೀವಿ, ಪಾಟಾಜೆ ಅಂಗನವಾಡಿ ಕೇಂದ್ರಕ್ಕೆ ಕಚೇರಿ ಟೇಬಲ್ ಕೊಡುಗೆ ನೀಡಲಾಯಿತು.
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ರೋಟರಿ ಕ್ಲಬ್ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ನೂತನ‌ ಸದಸ್ಯರ ಸೇರ್ಪಡೆ


ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಗೆ 12 ಮಂದಿ ಸದಸ್ಯರು ನೂತನವಾಗಿ ಸೇರ್ಪಡೆಗೊಂಡರು.


ಸುದ್ದಿ ಬಿಡುಗಡೆ ಪತ್ರಿಕೆಯ ಗಣೇಶ್ ಕುಕ್ಕುದಡಿ,ಗೋಪಾಲಕೃಷ್ಣ ಚೆಮ್ನೂರು,ನಟರಾಜ ದರ್ಖಾಸ್ತು, ಮಾಂಡ ಉದಯಕುಮಾರ್, ವೀರನಾಥ್ ಕಲ್ಲೋಣಿ, ಪ್ರೀತಮ್ ರೈ, ಪ್ರಶಾಂತ ತಂಟೆಪ್ಪಾಡಿ, ಮಹಾಬಲ ತಂಟೆಪ್ಪಾಡಿ, ಪಿಡಿಒ ಚೆನ್ನಪ್ಪ ಗೌಡ ಕಜೆಮೂಲೆ,ಮುಸ್ತಾಫ ಬೆಳ್ಳಾರೆ, ಪ್ರದೀಪ್ ಕಲ್ಲೋಣಿ ,ಅಬ್ದುಲ್ ನಾಸಿರ್ ಯು.ಎ.ಸೇರ್ಪಡೆಗೊಂಡರು.
ರೊ.ಕೇಶವಮೂರ್ತಿ ಸ್ವಾಗತಿಸಿ,ರೊ.ವಿಶ್ವನಾಥ ಕೆ.ವರದಿ ಮಂಡಿಸಿದರು.
ಕು.ಜ್ಯೋತ್ಸ್ನಾ ಪ್ರಾರ್ಥಿಸಿ,ರೊ.ಶ್ಯಾಮಸುಂದರ ರೈ,
ಮತ್ತು ರೊ.ಪ್ರಭಾಕರ ಆಳ್ವ ಕಾರ್ಯಕ್ರಮ ನಿರೂಪಿಸಿದರು.