ಕುಕ್ಕೆ ಫ್ರೆಂಡ್ಸ್ ಸುಬ್ರಮಣ್ಯ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಆಶಯದಲ್ಲಿ ಎರಡನೇ ವರ್ಷದ ಆಹ್ವಾನಿತ ಎಂಟು ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ಶನಿವಾರ ಸಂಜೆ ಸುಬ್ರಹ್ಮಣ್ಯದ ಕಾಶಿ ಕಟ್ಟೆ ಸರ್ಕಲ್ ಬೆಳೆಯ ಮೈದಾನದಲ್ಲಿ ನಡೆಯಿತು.
ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಬ್ರಹ್ಮಣ್ಯದ ಉದ್ಯಮಿ ಯಜ್ಞೇಶ್ ಆಚಾರ್ ಅವರು ಮಾತನಾಡುತ್ತಾ, ವಾಲಿಬಾಲ್ ಗ್ರಾಮೀಣ ಕ್ರೀಡೆಯಾಗಿದ್ದು ಎಲ್ಲಾ ವಯೋಮಿತಿಯವರು ಭೇದಭಾವ ಇಲ್ಲದೆ ಉತ್ಸಾಹದಿಂದ ಆಡುವ ಕ್ರೀಡೆಯಾಗಿದೆ, ಹಾಗೂ ವಾಲಿಬಾಲ್ ಅಚ್ಚುಮೆಚ್ಚಿನ ಕ್ರೀಡೆ ಕೂಡ ಆಗಿದೆ .ಸ್ಥಳೀಯ ಕುಕ್ಕೆ ಫ್ರೆಂಡ್ಸ್ ನ ಯುವಕರು ಕಳೆದೆರಡು ವರ್ಷಗಳಿಂದ ಗ್ರಾಮೀಣ ಜನರ ಮನರಂಜನೆ ಹಾಗೂ ಸಮಾಜದ ಸೇವಾ ಕಾರ್ಯಗಳಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ನಡೆಸಿಕೊಂಡು ಬರುವಂಥದ್ದು ಶ್ಲಾಘನೀಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಫ್ರೆಂಡ್ಸ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಶಬರೀಶ್ ಅವರು ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯದ ಉದ್ಯಮಿ ರಾಜೇಶ್ ಎನ್ ಎಸ್, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್, ನಿಕಟ ಪೂರ್ವ ಸುಳ್ಯ ತಾಲೂಕು ಪಂಚಾಯತ್ ಸದಸ್ಯ ಅಶೋಕ ನೆಕ್ರಾಜ, ಸಮಾಜ ಸೇವಕ ಡಾ. ರವಿ ಕಕ್ಕೆ ಪದವು ,ದೈಹಿಕ ಶಿಕ್ಷಣ ನಿರ್ಧೇಶಕ ರಾಧಾಕೃಷ್ಣ ಚಿದ್ಗಲ್ಲು, ಶ್ರೀದೇವಳದ ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಪವನ್ ಎಂ ಡಿ ,ನಿವೃತ್ತ ಪೊಲೀಸ್ ಅಧಿಕಾರಿ ಅತ್ಯುತ್ತ ಗೌಡ ಕೆ, ಗ್ರಾಮ ಲೆಕ್ಕಾಧಿಕಾರಿ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಜನಮನ್ನಣೆಯ ಸೇವೆಗಳನ್ನು ಮಾಡುತ್ತಾ ಬಂದಿರುವ ಯುವ ತೇಜಸ್ ಟ್ರಸ್ಟ್ ,ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಕುಕ್ಕೆ ಸರ್ಕಲ್ ನ ಸಾಧಕರನ್ನ ಗೌರವಿಸಲಾಯಿತು. ಅಲ್ಲದೆ ಟೈ ಟೈ ಕೊಂಡ ಸಮಾ ರಾಜ್ಯಮಟ್ಟದ ಪ್ರತಿಭೆ ಚಾಣಸ್ಯ, ಟೆನ್ನಿಕ್ವಯ್ಟ್ ರಾಜ್ಯಮಟ್ಟದ ಪ್ರತಿಭೆಗಳಾದ ಸುಪ್ರಿಯ, ಪ್ರತಿಕ್ಷ ,ಯಜ್ಞೇಶ್ ಹಾಗೂ ತ್ರೋಬಾಲ್ ರಾಜ್ಯಮಟ್ಟದ ಪ್ರತಿಭೆಗಳಾದ ರಚನ್, ಹಾಗೂ ಪಲ್ಲವಿ ಅವರುಗಳನ್ನ ಗೌರವಿಸಲಾಯಿತು. ಕುಕ್ಕೆ ಫ್ರೆಂಡ್ಸಿನ ಉಪಾಧ್ಯಕ್ಷ ಜೀವನ, ಕಾರ್ಯದರ್ಶಿ ರತಿನ್, ಖಜಾಂಜಿ ಹರ್ಷಿತ್ ಡಿವಿ, ನಿಕಟ ಪೂರ್ವ ಅಧ್ಯಕ್ಷ ಭವಿಷ್, ಸದಸ್ಯರುಗಳಾದ ಗೋಪಾಲಕೃಷ್ಣ, ಬಿವಿನ್, ಜಯೇಶ್, ಹಾಗೂ ಯಶ್ವಂತ್ ವಿವಿಧ ಜವಾಬ್ದಾರಿಗಳನ್ನ ಹಂಚಿಕೊಂಡು ಸಹಕರಿಸಿದರು .ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.