ಕುಕ್ಕೆಶ್ರೀ ಸುಬ್ರಹ್ಮಣ್ಯದ ಬೈಪಾಸ್ ರಸ್ತೆಯಲ್ಲಿರುವ ನಂದಶ್ರೀ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಕಿರಿಭಾಗ ರವರ ಮಾಲಕತ್ವದ ಆದಿಲಕ್ಷ್ಮೀ ಅಟೋಮೊಬೈಲ್ಸ್ ಹಾರ್ಡ್ವೇರ್ಸ್ ಮತ್ತು ಎಲೆಕ್ಟ್ರಿಕಲ್ ಶಾಪ್
ನ.25 ರಂದು ಶುಭಾರಂಭಗೊಂಡಿತು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ
ಕು. ಭಾಗೀರಥಿ ಮುರುಳ್ಯ ರವರು ಮಳಿಗೆಯನ್ನು ಉದ್ಘಾಟಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಪ್ರಜ್ವಲಿಸಿದರು.
ಮುಖ್ಯ ಅಭ್ಯಾಗತರಾಗಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಬ್ರಹ್ಮಣ್ಯ ಪಂಚಾಯತ್ ಸದಸ್ಯ ಗಿರೀಶ್ ಐನೆಕಿದು, ಸಮಾಜ ಸೇವಕ
ಡಾ.ರವಿ ಕಕ್ಕೆಪದವು, ಕಾಂಪ್ಲೆಕ್ಸ್ ಮಾಲಕಿ ಶ್ರೀಮತಿ ನಿರ್ಮಲಾ ಬಿ, ಉಬರಡ್ಕ ಮಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ,ಉದ್ಯಮಿ ಜಗದೀಶ್ ಸರಳಿಕುಂಜ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಾಲಕರ ಪತ್ನಿ ಶ್ರೀಮತಿ ಭವ್ಯ ಹಾಗೂ ಕಿರಿಭಾಗ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.
ಯುವ ಉದ್ಯಮಿ ಪಿ.ಡಬ್ಲ್ಯೂ ಡಿ ಗುತ್ತಿಗೆದಾರ ರಾಜೇಶ್ ಕಿರಿಭಾಗ ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಾಳುಗೋಡು ವಿಶ್ವ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ನೂತನ ಮಳಿಗೆಯಲ್ಲಿ ಎಲ್ಲಾ ತರದ ವಾಹನಗಳ ಬಿಡಿಭಾಗಗಳು ಅಲ್ಲದೆ ಜೆಸಿಬಿ ಹಿಟಾಚಿ ಮತ್ತು ಘನ ವಾಹನಗಳ ಸ್ಪೇರ್ ಪಾರ್ಟ್ಸ್ , ಬ್ಯಾಟರಿಗಳು ಇಲೆಕ್ಟ್ರಿಕಲ್ ಐಟಂಗಳು, ಕೃಷಿ ಉಪಕರಣಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.