ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಚೆನ್ನಮಣೆ ಸ್ಪರ್ಧೆ

0

ಚೆನ್ನಮಣೆ ಆಟ ಜಾನಪದ ಆಟದ ಮೂಲ ಸ್ವರೂಪ ಉಳಿಸಿಕೊಂಡಿದೆ : ಡಾ.ಸುಂದರ ಕೇನಾಜೆ

ಅನೇಕ ಜಾನಪದ ಆಟಗಳ ಮೂಲ ಸ್ವರೂಪದಲ್ಲಿ ಬದಲಾವಣೆಯಾಗಿವೆ. ಆದರೆ ಚೆನ್ನಮಣೆ ಆಟದ ಮೂಲ ಸ್ವರೂಪದಲ್ಲಿ ಯಾವುದೇ ಬದಲಾಣೆಯಾಗಿಲ್ಲ. ಚೆನ್ನಮಣೆ ಆಟ ಮುಂದೊಂದು ದಿನ ರಾಷ್ಟ್ರೀಯ ಅಂತರಾಷ್ಟ್ರೀಯ ಕ್ರೀಡೆಯಾಗಲಿದೆ ಎಂದು ಜಾನಪದ ವಿದ್ವಾಂಸ ಡಾ.ಸುಂದರ ಕೇನಾಜೆ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಿ.ಸಿ.ಆರ್.ಟಿ. ಗ್ರೂಪ್ ಸುಳ್ಯ ಸ.ಪ.ಪೂ. ಕಾಲೇಜು ಐವರ್ನಾಡು ಇದರ ಸಂಯುಕ್ತ ಆಶ್ರಯದಲ್ಲಿ ಐವರ್ನಾಡು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜು.27ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ
ತಾಲೂಕು ಮಟ್ಟದ ಚೆನ್ನಮಣೆ ಸ್ಪರ್ಧೆ-2024 ಉದ್ಘಾಟಿಸಿ ಮಾತನಾಡಿದರು.

ಸಿ.ಸಿ.ಆರ್.ಟಿ ತಾಲೂಕು ಅಧ್ಯಕ್ಷ ಚಿನ್ನಪ್ಪ ಗೌಡ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ,
ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಶೀತಲ್,ಐವರ್ನಾಡು ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್‌ ಇಸಾಕ್, ಐವರ್ನಾಡು ಹೈಸ್ಕೂಲ್ ಮುಖ್ಯ ಶಿಕ್ಷಕ ಶೂಫಿ ಪೆರಾಜೆ,ಶಾಲಾ ಅಭಿವ್ರದ್ದಿ ಸಮಿತಿ ಅಧ್ಯಕ್ಷ ದಯಾನಂದ ಕಟ್ಟತ್ತಾರು ,ಎಣ್ಮೂರು‌ ಶಾಲೆಯ ಚಿತ್ರಕಲಾ ಶಿಕ್ಷಕ ಮೋಹನ್,ಉಪನ್ಯಾಸಕ ಕಮಲಾಕ್ಷ ವೇದಿಯಲ್ಲಿ ಉಪಸ್ಥಿತರಿದ್ದರು.

ಸಿ.ಸಿ.ಆರ್.ಟಿ ಸುಳ್ಯ ಗ್ರೂಪಿನ ಕಾರ್ಯದರ್ಶಿ ನಿವ್ರತ್ತ ಶಿಕ್ಷಣ ಸಂಯೋಜಕ ಕೇಶವ ವಂದಿಸಿದರು.