ಬ್ಲೆಸ್ಡ್ ಕುರಿಯ ಕೋಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘದ ರಚನೆ ಮತ್ತು ಸನ್ಮಾನ ಕಾರ್ಯಕ್ರಮ

0

ಗುತ್ತಿಗಾರಿನ ಬ್ಲೆಸ್ಡ್ ಕುರಿಯ ಕೋಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘದ ರಚನೆ ಮತ್ತು ಸನ್ಮಾನ ಕಾರ್ಯಕ್ರಮವು ಜು.27ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೈಂಟ್ ಮೇರಿಸ್ ಚರ್ಚಿನ ಧರ್ಮ ಗುರುಗಳಾದ ಫಾದರ್ ಆದರ್ಶ್ ಜೋಸೆಫ್ ಭಾಗವಹಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತನ್ನು ಮೂಡಿಸುವುದು ಪೋಷಕರ ಕರ್ತವ್ಯ ಎಂದು ಹೇಳಿದರು.

2022-2024 ರವರೆಗಿನ ಶಿಕ್ಷಕ ರಕ್ಷಕ ಸಂಘದ ವರದಿಯನ್ನು ಸಂಘದ ಅಧ್ಯಕ್ಷ ಲಿಜೋ ಜೋಶ್ ರವರು ಮಂಡಿಸಿದರು.

ಮಾಜಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ 4 ಬಾರಿ ವಿಶ್ವ ದಾಖಲೆ ಮಾಡಿ ಗುರುತಿಸಿಕೊಂಡ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ ಇವಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಟ್ರೀಸ ಜಾನ್ ಅವರ ನೇತೃತ್ವದಲ್ಲಿ ಪೋಷಕರ ಅನುಮೋದನೆ ಯೊಂದಿಗೆ 2024-2025 ರ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕರಕ್ಷಕ ಸಂಘ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಲಿಜೋ ಜೋಸ್, ಉಪಾಧ್ಯಕ್ಷರಾಗಿ ಸಂತೋಷ್ ಪಳಂಗಾಯ, ಪದಾಧಿಕಾರಿಗಳಾಗಿ ನವೀನ್ ಕುಮಾರ್ ಜಾಕೆ, ಪುರುಷೋತ್ತಮ ರವರು ಆಯ್ಕೆಯಾದರು. ಆಯ್ಕೆಯಾದವರಿಗೆ ಮುಖ್ಯ ಅತಿಥಿಗಳು ಶಾಲು ಹೊದಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಶ್ರೀಮತಿ ರಮ್ಯ ಪ್ರಾರ್ಥಿಸಿ, ಶ್ರೀಮತಿ ತಾರವೇಣಿ ಸ್ವಾಗತಿಸಿ, ಶಿಕ್ಷಕ ರಜನೀಶ್ ವಂದಿಸಿದರು. ಶಿಕ್ಷಕಿ ಶಾಂತಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.