ಸುಳ್ಯ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸರಿಗೆ ಬೀಳ್ಕೊಡುಗೆ ಸಮಾರಂಭ

0

ಕರ್ತವ್ಯದಲ್ಲಿ ಕಳೆದ ದಿನಗಳ ಬಗ್ಗೆ ಮನ ಬಿಚ್ಚಿ ಮಾತಾಡಿದ ಪೊಲೀಸರು

ಸುಳ್ಯ ಠಾಣೆಯಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆ ಗೊಂಡಿರುವ ಪೊಲೀಸರಿಗೆ ಬೀಳ್ಕೊಡುವ ಕಾರ್ಯಕ್ರಮ ಜು 29 ರಂದು ಸುಳ್ಯ ಠಾಣಾ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಠಾಣಾ ಉಪ ನಿರೀಕ್ಷಕರಾದ ಈರಯ್ಯ ದೂಂತೂರು ವಹಿಸಿ ವರ್ಗಾವಣೆಗೊಂಡ ಎಲ್ಲಾ ಪೊಲೀಸರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಎಲ್ಲಾ ಸಿಬ್ಬಂದಿಗಳು ಠಾಣೆಯಲ್ಲಿ ತಮ್ಮ ತಮ್ಮ ಕರ್ತವ್ಯವನ್ನು ಅಚ್ಚು ಕಟ್ಟಾಗಿ ಮಾಡಿಕ್ಕೊಂಡು ನನಗೆ ಸಹಕಾರ ನೀಡಿದ್ದೀರಿ. ಕಳ್ಳತನ ಮತ್ತು ಇತರ ದೊಡ್ಡ ಪ್ರಕರಣಗಳ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬೇರೆ ಬೇರೆ ಕಡೆಗಳಿಗೆ ಹೋದ ಸಮಯ ಪರಸ್ಪರ ಒಗ್ಗಟ್ಟಿನಿಂದ ಕಾರ್ಯಚಾರಣೆ ಮಾಡಿ ಯಶಸ್ವಿಯಾದ ದಿನಗಳ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಸಂತೋಷ್,ಸುಳ್ಯ ಠಾಣಾ ಅಪರಾಧ ತನಿಖಾ ವಿಭಾಗದ ಎಸ್ ಐ ಕುಮಾರಿ ಸರಸ್ವತಿ,
ವರ್ಗಾವಣೆಗೊಂಡಿರುವ ಎ ಎಸ್ ಐ ಗಂಗಾಧರ,ಹೆಡ್ ಕಾನ್ಸ್ಟೇಬಲ್ ಗಳಾದ ಸತೀಶ್ ಸಿ ,ಸತೀಶ್, ಉದಯ ಗೌಡ ,ಶಿವಾನಂದ ಕೆ,ರಾಮ ನಾಯ್ಕ,ಶ್ರೀಮತಿ ಶಾಲಿನಿ,ಪೊಲೀಸ್ ಕಾಂಸ್ಟೇಬಲ್ ಗಳಾದ ಸುರೇಶ್,ಮಹಮ್ಮದ್ ಮೌಲಾನ, ಚಂದ್ರಶೇಖರ ಸಜ್ಜನ್, ಸುನಿಲ್ ತಿವಾರಿ,ನಾಗರಾಜ್ ಎಚ್ ವ,ಮನುಗೌಡ,ಮನುನಾಯ್ಕ್ ,ಮಧು ಜಿ ಡಿ,ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಬೇರೆಡೆಯಿಂದ ವರ್ಗಾವಣೆ ಗೊಂಡು ಸುಳ್ಯ ಠಾಣೆಗೆ ಬಂದಿರುವ ಎಲ್ಲಾ ಪೊಲೀಸರನ್ನು ಹೂ ನೀಡಿ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.

ಬಳಿಕ ಠಾಣಾ ಎ ಎಸ್ ಐ ತಾರಾನಾಥ್ ಸೇರಿದಂತೆ ಇತರ ಅಧಿಕಾರಿಗಳು,ವರ್ಗಾವಣೆ ಗೊಂಡಿರುವ ಸಹ ಸಿಬ್ಬಂದಿಗಳು ಠಾಣೆಯಲ್ಲಿ ಮಾಡಿರುವ ಕರ್ತವ್ಯಗಳ ಬಗ್ಗೆ ಮತ್ತು ಅವರೊಂದಿಗೆ ಇದ್ದ ಒಡನಾಟದ ಬಗ್ಗೆ ಮಾತನಾಡಿ ಶುಭಹಾರೈಸಿದರು.

ವರ್ಗಾವಣೆ ಗೊಂಡಿರುವ ಎ ಎಸ್ ಐ ಗಂಗಾಧರ್ ,ಹೆಡ್ ಕಾಂಸ್ಟೇಬಲ್ ರು ಗಳಾದ ಶ್ರೀಮತಿ ಶಾಲಿನಿ, ಸತೀಶ್ ಹಾಗೂ ಪೊಲೀಸ್ ಕಾಂಸ್ಟೇಬಲ್ ರುಗಳಾದ ಮಹಮ್ಮದ್ ಮೌಲಾನ ಮೊದಲಾದವರು ಮಾತನಾಡಿ ಸುಳ್ಯ ಠಾಣೆಯಲ್ಲಿ ಕರ್ತವ್ಯದಲ್ಲಿ ಕಳೆದ ದಿನಗಳ ಬಗ್ಗೆ, ಸಹಕಾರ ನೀಡಿದ ಅಧಿಕಾರಿಗಳ ಬಗ್ಗೆ,ಸಹ ಸಿಬ್ಬಂದಿಗಳ ಬಗ್ಗೆ,ಅವರೊಂದಿಗೆ ಬೆರೆತ ದಿನಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ ಪರಸ್ಪರ ಧನ್ಯವಾದಗಳನ್ನು ಸಮರ್ಪಸಿ ಕ್ಕೊಂಡರು. ಅನೇಕ ವರ್ಷಗಳಿಂದ ಒಂದೇ ಠಾಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿ ಏಕ ಏಕಿ ವರ್ಗಾವಣೆ ಗೊಂಡದರ ಬಗ್ಗೆ ಮಾತನಾಡಿ ಕೆಲವರು ಭಾವುಕರಾದರು.

ಒಟ್ಟಿನಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಪರಸ್ಪರ ಕಷ್ಟ ಸುಖಗಳನ್ನು ಹೇಳಿಕ್ಕೊಂಡು ಕೆಲ ಸಮಯ ಸ್ನೇಹಿತರಂತೆ ಕಳೆದುಕ್ಕೊಂಡರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಕೀಲರಾದ ಎಂ ವೆಂಕಪ್ಪ ಗೌಡ,ಭವಾನಿ ಶಂಕರ್ ಅಡ್ತಲೆ, ಬಿ ಇ ಓ ಕಚೇರಿ ಅಧಿಕಾರಿ ಶಿವಪ್ರಕಾಶ್,ಉದ್ಯಮಿ ರಂಜಿತ್ ಪೂಜಾರಿ, ಸಮಾಜ ಸೇವಕ ಆಶಿಫ್ ಅಚ್ಚು,ಅಭಿ ಮೊದಲಾದವರು ಭಾಗವಹಿದ್ದರು.

ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬಂದ್ದಿಗಳು,ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಅನು ಕುಮಾರ್ ಸ್ವಾಗತಿಸಿ ಹಾಲೇಶ್ ವಂದಿಸಿದರು.ಕಾರ್ಯಕ್ರಮದ ಆಯೋಜಕರಲ್ಲಿ ಓರ್ವರಾದ ಪ್ರಕಾಶ್ ಮತ್ತು ಇತರರು ಸಹಕರಿಸಿದರು.
ಹೆಡ್ ಕಾಂಸ್ಟೇಬಲ್ ದೇವರಾಜ್ ಕೋಲ್ಚಾರ್ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಎಲ್ಲರಿಗೂ ಭೋಜನ ವ್ಯವಸ್ಥೆ ಯನ್ನು ಮಾಡಲಾಗಿತ್ತು.