ಡಿ 16 ರಿಂದ ಹರಿಹರೇಶ್ವರ ದೇವಾಲಯದಲ್ಲಿ ಧನುಪೂಜೆ

0

ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಇಲ್ಲಿ ಡಿ.16 ರಿಂದ 2026 ರ ಜ.14 ತನಕ ಪ್ರತಿದಿನ ಪ್ರಾತಃಕಾಲ 5.30ಕ್ಕೆಧನುಪೂಜೆ ನಡೆಯಲಿದೆ.

ಜ.14ರ ಮಕರ ಸಂಕ್ರಮಣ ಪ್ರಾತಃಕಾಲ ಗಂಟೆ 4.00 ರಿಂದ ಉದ್ಯಾಪನ ಧನುಪೂಜೆ ಮತ್ತು ಧನುಪೂಜೆ ಸಮಾಪ್ತಿ‌ ನಡೆಯಲಿದ್ದು ಮಧ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಮತ್ತು ವನ ಭೋಜನ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಧನುಪೂಜೆಯ 1ರ ದರ ರೂ. 100 ಆಗಿದ್ದು. ವನಶಾಸ್ತವೇಶ್ವರನ ಪೂಜೆ 1ರ ದರ ರೂ. 75/- ಆಗಿರುತ್ತದೆ.
ಹೂವಿನ ಅಲಂಕಾರ ಸೇವೆ ಮಾಡಿಸುವವರು ಒಂದು ದಿನ ಮುಂಚಿತವಾಗಿ ನೋಂದಾಯಿಸುವಂತೆ ಸೂಚಿಸಲಾಗಿದೆ.