ಅತಿ ಕಡಿಮೆ ಬೆಳೆ ವಿಮೆ ಪಾವತಿಯಾಗಲು ಅಧಿಕಾರಿಗಳು ಕಾರಣ

0

ಮಲೆನಾಡು ಹಿತ ರಕ್ಷಣಾ ವೇದಿಕೆ ವತಿಯಿಂದ ಹಕ್ಕೊತ್ತಾಯ ಸಭೆಗೆ ನಿರ್ಧಾರ

ರೈತರಿಗೆ ಅತಿ ಕಡಿಮೆ ಬೆಳೆ ವಿಮೆ ಪಾವತಿಯಾಗಿರುವ ಕಾರಣ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಹಕ್ಕೊತ್ತಾಯ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಬೆಳೆ ವಿಮೆ ಅತಿ ಕಡಿಮೆ ಬರಲು ಕಾರಣರಾದವರು ಸರ್ಕಾರಿ ಅಧಿಕಾರಿಗಳು ಎಂದಿದೆ ಅಧಿಕಾರಿಗಳು ಸರಿಯಾದ ವರದಿ ನೀಡದಿರುವ ಕಾರಣ ಅತಿ ಕಡಿಮೆ ಬೆಳೆ ವಿಮೆ ಬಂದಿದೆ ಎಂದು ಪ್ರತಿಪಾದಿಸಿದೆ. ಅಲ್ಲದೆ ಅರಣ್ಯ ಇಲಾಖೆಯ ನೀತಿ ಕೂಡ ರೈತರಿಗೆ ದುಬಾರಿ ಆಗುತ್ತಿದೆ, ಇದನ್ಬೆಲ್ಲಾ ಮನಗಂಡು ವೇದಿಕೆ ವತಿಯಿಂದ ಹಕ್ಕೊತ್ತಾಯ ಸಭೆ ಮಾಡುವುದಾಗಿ ನಿರ್ಣಯಿಸಲಾಗಿದೆ.

ಸಭೆಯಲ್ಲಿ
ಕಿಶೋರ್ ಕುಮಾರ್ ಶಿರಾಡಿ, ರಮಾನಂದ ಎಣ್ಣೆಮಜಲು, ಅಶೋಕ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ಸತೀಶ್ ಟ.ಎನ್, ಚಂದ್ರಶೇಖರ ಬಾಳುಗೋಡು ಮತ್ತಿತರರು ಉಪಸ್ಥಿತರಿದ್ದರು.