
ಅಮರಪಡ್ನೂರು ಗ್ರಾಮದ ಜೋಗಿಯಡ್ಕದಲ್ಲಿ ಪ್ರವೀಣ್ ಮುಂಡ್ರಾಜೆಯವರ ಮಾಲಕತ್ವದ ಲವೀಶ್ ಹೋಮ್ ಫುಡ್ ಪ್ರೊಡಕ್ಟ್ ನ.30 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಪುರೋಹಿತ ರಾಧಾಕೃಷ್ಣ ಭಟ್ ರವರು ಗಣಹೋಮ ನೆರವೇರಿಸಿದರು.








ಈ ಸಂದರ್ಭದಲ್ಲಿ ವೆಂಕಟ್ರಮಣ ಮುಂಡ್ರಾಜೆ ಕೊಪ್ಪತ್ತಡ್ಕ ,ಶ್ರೀಮತಿ ಮೋಹಿನಿ ವೆಂಕಟ್ರಮಣ, ಲೋಹಿತ್ ಮುಂಡ್ರಾಜೆ,ಕಟ್ಟಡ ಮಾಲಕ ಲಿಂಗಪ್ಪ ಗೌಡ ಖಂಡಿಗೆಮೂಲೆ,ನಾರ್ಣಪ್ಪ ಗೌಡ ಕೊರತ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿ ನೇಂದ್ರ ಬಾಳೆಹಣ್ಣಿನ ಚಿಪ್ಸ್,ಬಟಾಟೆ ಚಿಪ್ಸ್, ಮರಗೆಣಸು ಚಿಪ್ಸ್,ಸಿಹಿ ಗೆಣಸು ಚಿಪ್ಸ್, ಮಸಾಲೆ ಕಡ್ಲೆ , ಡ್ರೈಫ್ರುಟ್ಸ್ ನ ಉತ್ಪನ್ನಗಳು,ಕಷಾಯ ಪೌಡರ್, ಹಾಗೂ ಇನ್ನಿತರ ಬೇಕರಿ ಉತ್ಪನ್ನಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.









