3. 20 ಕೋಟಿ ಅನುದಾನದಲ್ಲಿ ಫೀಡರ್ ಕಾಮಗಾರಿ ಪ್ರಗತಿಯಲ್ಲಿ
ಗುತ್ತಿಗಾರು ಮೆಸ್ಕಾಂ ಶಾಖಾ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸಭೆಯು ಇಂದು ಮೆಸ್ಕಾಂ ಕಚೇರಿಯಲ್ಲಿ ನಡೆಯಿತು.








ಸಭೆಯ ಅಧ್ಯಕ್ಷತೆಯನ್ನು ಮೆಸ್ಕಾಂ ಸುಬ್ರಮಣ್ಯ ವಿಭಾಗದ ಎ .ಇ.ಇ. ಸತೀಶ್‌ರವರು ವಹಿಸಿ, ಮಾತನಾಡಿ ಗುತ್ತಿಗಾರು -ಕೂತ್ಕುಂಜ- ಮಡಪ್ಪಾಡಿ- ಮರ್ಕಂಜ ಈ ಭಾಗಗಳಲ್ಲಿ ವಿದ್ಯುತ್ ಸುಧಾರಣೆಗಾಗಿ ಆರು ಕಡೆ ಸುಮಾರು ೩.೨೦ ಕೋಟಿ ರೂಪಾಯಿಯ ಅನುದಾನದಲ್ಲಿ ಫೀಡರ್ ಅಳವಡಿಕೆ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂಬುದಾಗಿ ತಿಳಿಸಿದರು.
ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ಲೈನ್ ಮ್ಯಾನ್‌ಗಳನ್ನು ನೇಮಕ ಮಾಡುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದ ಮಟ್ಟದಲ್ಲಿ ಪ್ರಗತಿಯಲ್ಲಿದೆ. ಇನ್ನು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಇಲಾಖೆ ಚಿಂತಿಸುತ್ತಿದೆ. ಅದಕ್ಕಾಗಿ ಗ್ರಾಹಕರು ಸಹಕರಿಸಬೇಕಾಗಿದೆ ಎಂದರು ಸಭೆಯಲ್ಲಿ ಗ್ರಾಹಕ ಸಲಹಾ ಸಮಿತಿಯ ಸದಸ್ಯರಾದ ದಿನೇಶ್ ಹಾಲೆಮಜಲು ಹಾಗೂ ಪುರುಷೋತ್ತಮ ಮುಂಡೋಡಿ ಸೇರಿದಂತೆ ಮೆಸ್ಕಾಂ ಅಧಿಕಾರಿಗಳು ಲೈನ್ ಮ್ಯಾನ್‌ಗಳು ಉಪಸ್ಥಿತರಿದ್ದರು.








