ತೊಡಿಕಾನ: ರಸ್ತೆಗೆ ಆವರಿಸಿದ ನೆರೆನೀರು

0

ಭಾರೀ ಮಳೆಗೆ ನೆರೆನೀರು ರಸ್ತೆಗೆ ಆವರಿಸಿದ ಘಟನೆ ಅರಂತೋಡು ಗ್ರಾ.ಪಂ. ವ್ಯಾಪ್ತಿಯ ತೊಡಿಕಾನದಲ್ಲಿ ಸಂಭವಿಸಿದೆ.

ಅರಂತೋಡು ಮೂಲಕ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾ‌ನಕ್ಕೆ ತೆರಳುವ ರಸ್ತೆಯ ತೊಡಿಕಾನ ಹಾಲು ಉತ್ಪಾದಕ ಸಹಕಾರಿ ಸಂಘದ ಬಳಿ ಭಾರೀ ಮಳೆಗೆ ಸಮೀಪದಲ್ಲಿ ಹರಿಯುವ ತೋಡಿನಿಂದ ನೆರೆನೀರು ರಸ್ತೆಗೆ ಆವರಿಸಿ, ಕೆಲಕಾಲ ವಾಹನ ಸಂಚಾರಕ್ಕೆ ತೊಡಕಾಯಿತೆಂದು ತಿಳಿದುಬಂದಿದೆ.