ಅಯ್ಯನಕಟ್ಟೆ ಸ.ಉ.ಹಿ.ಪ್ರಾ. ಶಾಲೆ ಹಳೆ ವಿದ್ಯಾರ್ಥಿ ಸಂಘ ರಚನೆ, ಗೌರವಾಧ್ಯಕ್ಷರಾಗಿ ಶ್ರೀನಾಥ್ ರೈ, ಅಧ್ಯಕ್ಷರಾಗಿ ರಾಜೇಶ್ ಸುವರ್ಣ, ಅಝೀಜ್ ಕಾರ್ಯದರ್ಶಿ

0

ಅಯ್ಯನಕಟ್ಟೆ ಸ.ಉ.ಹಿ.ಪ್ರಾ.ಶಾಲಾ ಹಳೆವಿದ್ಯಾರ್ಥಿ ಸಂಘದ ಮಹಾಸಭೆ ಜು. 28ರಂದು ನಡೆಯಿತು. ಇದೇ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.

ಹಿರಿಯ ವಿಧ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಶ್ರೀನಾಥ ರೈ ದೋಳ್ತೋಡಿ, ಅಧ್ಯಕ್ಷರಾಗಿ ರಾಜೇಶ್ ಸುವರ್ಣ, ಕಾರ್ಯದರ್ಶಿಯಾಗಿ ಅಝೀಝ್ ಗುರಿಕ್ಕಾನ, ಜೊತೆ ಕಾರ್ಯದರ್ಶಿಯಾಗಿ ಸುಂದರ ಪಂಜಿಗಾರು, ಹಾಗೂ ಕರೀಂ ಪಂಜಿಗಾರು,
ಕೋಶಾಧಿಕಾರಿಯಾಗಿ ರೋಹಿತಾಶ್ವ ಅಯ್ಯನಕಟ್ಟೆ, ಉಪಾಧ್ಯಕ್ಷರುಗಳಾಗಿ ಖಲೀಲ್ ಅಯ್ಯನಕಟ್ಟೆ, ಜಯಂತ ಪಿ, ಪವನ್ ರೈ ಅಗಲ್ಪಾಡಿ ಹಾಗೂ ಅಶ್ಪಕ್ ಪಂಜಿಗಾರು ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ರಮೇಶ್ ರೈ ಅಗಲ್ಪಾಡಿ, ಸುಭಾಶ್ಚಂದ್ರ ಕಳಂಜ, ಶಾಲಾ ಎಸ್.ಡಿ.ಎಂ ಸಿ‌‌ ಅಧ್ಯಕ್ಷ ಭಾಸ್ಕರ ಮಣಿಮಜಲು, ಮುಖ್ಯೋಪಾಧ್ಯಾಯಿನಿಶ್ರೀಮತಿ ವಿದ್ಯಾ ಕೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಅಜೀವ ಸದಸ್ಯತನ ಪಡೆಯುವ ಬಗ್ಗೆ ಚರ್ಚಿಸಿ ಅಜೀವ ಸದಸ್ಯತನದ ಮೊತ್ತವನ್ನು ಮುಂದೆ ನಡೆಯಲಿರುವ 2 ನೇ ಸಭೆಯಲ್ಲಿ ತೀರ್ಮಾನಿಸಿ ಸದಸ್ಯತ್ವಕ್ಕೆ ಅವಕಾಶ ಮಾಡಿ‌ಕೊಡುವುದಾಗಿ ತೀರ್ಮಾನಿಸಲಾಯಿತು.


ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಯೋಗಿನಾಥ, ಮುರಳಿ, ಶಕೀಲ್, ದೀಪಕ್ ಪಿ, ಸತೀಶ, ತಾಬಿರ್, ವಿನಯಚಂದ್ರ, ಸಂಶುದ್ದೀನ್, ಕಿಶನ್, ಸಚಿನ್, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.