ಭಾರೀ ಮಳೆಗೆ ಪಂಜದ ಬೊಳ್ಳಾಜೆಯಲ್ಲಿ ಗುಡ್ಡ ಕುಸಿತ

0

ಭಾರೀ ಮಳೆಯಿಂದ ಪಂಜದ ಬೊಳ್ಳಾಜೆ ಹರೀಶ್ ಎಂಬವರ ಮನೆ ಎದುರು ಭಾರೀ ಗುಡ್ಡ ಕುಸಿತ ಗೊಂಡಿದೆ. ಗುಡ್ಡ ಕುಸಿತದ ಮಣ್ಣು ಅಂಗಳಕ್ಕೆ ಆವರಿಸಿದೆ , ಗುಡ್ಡದ ಮೇಲಿರುವ ರಸ್ತೆ ಕೂಡ ಸಂಪರ್ಕ ಕಡಿತ ಗೊಂಡಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ ಬೊಳ್ಳಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.