ಸುಳ್ಯ : ಮಹಿಳಾ ಸಮಾಜದಲ್ಲಿ ಆಟಿ ಉತ್ಸವ

0

ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಆಟಿ ಉತ್ಸವ ಸಹಕಾರಿ : ಚಂದ್ರಾವತಿ ಬಡ್ಡಡ್ಕ

ಮಹಿಳಾ ಸಮಾಜ ಸುಳ್ಯ, ಎಂ.ಬಿ. ಫೌಂಡೇಶನ್ ಸುಳ್ಯ, ಪಯಸ್ವಿನಿ ಯುವತಿ ಮಂಡಲ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಆಟಿಯ ಸಂಭ್ರಮ ಕಾರ್ಯಕ್ರಮ ಆ. 7 ರಂದು ಸುಳ್ಯದ ಮಹಿಳಾ ಸಮಾಜದಲ್ಲಿ ನಡೆಯಿತು.

ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಅರೆಭಾಷೆ ಅಕಾಡೆಮಿ ಸದಸ್ಯೆ, ಲೇಖಕಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆಟಿಯ ಮಹತ್ವದ ಬಗ್ಗೆ ಮಾತನಾಡಿ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಆಟಿ ಉತ್ಸವ ಸಹಕಾರಿ ಎಂದರು.

ಮಹಿಳಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ, ಗೌರವ ಸಲಹೆಗಾರರಾದ ಶ್ರೀಮತಿ ನೇತ್ರಾವತಿ ಪಡ್ಡಂಬೈಲು, ಕಾರ್ಯದರ್ಶಿ ಹೇಮಾ ಗಿರೀಶ್ ವೇದಿಕೆಯಲ್ಲಿದ್ದರು.

ಶ್ರೀಮತಿ ರಾಧಾಮಣಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು. ಮನೆಗಳಲ್ಲಿ ತಾವೇ ತಯಾರಿಸಿ ತಂದಿದ್ದ ಆಟಿಯ ಖಾದ್ಯಗಳಲ್ಲಿ ಉತ್ತಮವಾದುದ್ದಕ್ಕೆ ಬಹುಮಾನ ಕೊಡಲಾಯಿತು.