ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಟಿಂಕರಿಂಗ್ ಪ್ರಯೋಗ ಶಾಲೆ ಅಗತ್ಯ ಡಾ. ಚಂದ್ರಶೇಖರ ದಾಮ್ಲೆ

0

“ಸ್ನೇಹ ಶಾಲೆಯಲ್ಲಿ 2024 -25ರ ಶೈಕ್ಷಣಿಕ ವರ್ಷದಲ್ಲಿ Right to live ಪ್ರಾಯೋಜಕತ್ವದಲ್ಲಿ ಆರಂಭವಾದ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಕಲಿಯಬೇಕು” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ಹೇಳಿದರು . ಅವರು ದಿನಾಂಕ. 7-8- 24ರಂದು ಸಂಸ್ಥೆಯಲ್ಲಿ ಟಿಂಕರಿಂಗ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ tan90 Lab ನ ತರಬೇತುದಾರ ಆಗಿರುವ ಜಯಂತ್ ಉಪಸ್ಥಿತರಿದ್ದರು. ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ಶ್ರೀಮತಿ ಪ್ರತಿಮಾ ಕುಮಾರಿ ಕೆ ಎಸ್. ಧನ್ಯವಾದವಿತ್ತರು.