ಕೇನ್ಯ ಕಟ್ಟತ್ತಾರು ಕೆ ರತ್ನಾವತಿ ರೈ ನಿಧನ

0

ಕೇನ್ಯ ಗ್ರಾಮದ ದಿ. ವಿಠಲ ರೈಯವರ ಪತ್ನಿ ಕೇನ್ಯ ಕಟ್ಟತ್ತಾರು ಕೆ. ರತ್ನಾವತಿ ರೈಯವರು ಆ. 2ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ ಅಂದಾಜು 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸುಂದರ ರೈ ಕೇನ್ಯ, ಮುಂಬೈಯಲ್ಲಿ ಉದ್ಯಮಿಯಾಗಿರುವ ತಾರಾನಾಥ ರೈ ಕೇನ್ಯ, ಪುತ್ರಿಯರಾದ ಶ್ರೀಮತಿ ಹರಿಣಾಕ್ಷಿ ಬಾಲಕೃಷ್ಣ ರೈ, ಶ್ರೀಮತಿ ಸೌಮ್ಯ ಸುರೇಶ್ ಶೆಟ್ಟಿ ಮಂಜೇಶ್ವರ, ಸಹೋದರ ದೇವದಾಸ ರೈ ಸವಣೂರು, ಸಹೋದರಿ ಶ್ರೀಮತಿ ಗುಬ್ಬಕ್ಕ ಶೀನಪ್ಪ ರೈ ಸರ್ವೆ, ಶ್ರೀಮತಿ ಗುಲಾಬಿ ರೈ ಸವಣೂರು ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.