ಬೈಕ್ ಸವಾರನಿಗೆ ಹಾಗೂ ಪ್ರಯಾಣಿಕರಿಗೆ ಗಾಯ
ಜೀಪಿಗೆ ಬೈಕೊಂದು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಜೀಪಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಸುಳ್ಯದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಇಂದು ಸಂಭವಿಸಿದೆ.
ಮರ್ಕಂಜಕ್ಕೆ ಹೋಗಿ ವಾಪಾಸ್ ಕರಿಕೆ ಕಡೆಗೆ ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಹೋಗುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಬೈಕೊಂದು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಜೀಪಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡರು. ಜೀಪಿನಲ್ಲಿ ೮ ಮಂದಿ ಪ್ರಯಾಣಿಸುತ್ತಿದ್ದು, ನಾಲ್ವರಿಗೆ ಗಾಯಗಳಾಗಿದೆ. ಅಪಘಾತ ಸಂಭವಿಸಿದ ಪರಿಣಾಮವಾಗಿ ಜೀಪು ಪಲ್ಟಿಯಾಗಿದೆ. ಬೈಕ್ ಸವಾರ ಆಲೆಟ್ಟಿಯ ಕಂಟ್ರಾಕ್ಟರ್ ಶಶಿಧರನ್‌ರವರಿಗೆ ಗಂಭೀರ ಗಾಯಗಳಾಗಿದ್ದು, ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.