ಯೇನೆಕಲ್ಲು ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆಯಲ್ಲಿ ಆ. 10ರಂದು ಸುಳ್ಯ ತಾಲೂಕು ಮಟ್ಟದ ಚೆಸ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಪಂದ್ಯಾಟದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅದ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆಯವರು ವಹಿಸಿ ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಭಾದ್ಯಕ್ಷತೆಯನ್ನು ಎಸ್.ಡಿ .ಎಂ.ಸಿ ಅಧ್ಯಕ್ಷ ಅಶೋಕ ಕುಮಾರ್ ಅಂಬೆಕಲ್ಲು ವಹಿಸಿ ಪಂದ್ಯಾಟಕ್ಕೆ ಶುಭಕೋರಿದರು. ಸುಳ್ಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಂದರ್, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರಾದ ಮೋಹನ್ ಕೋಟಿಗೌಡನಮನೆ, ಮಾಜಿಸೈನಿಕ, ಯೇನೆಕಲ್ಲು ಪ್ರಾ.ಕೃ ಪ. ಸ.ಸಂಘದ ಅಧ್ಯಕ್ಷರಾದ ಭವಾನಿ ಮಶಂಕರ ಪೂಂಬಾಡಿ ಉಪಸ್ಥಿತಿತರಿದ್ದು, ಪಂದ್ಯಾಟಕ್ಕೆ ಶುಭಹಾರೈಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಾಗರಜ ಪಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಿಕಾ ಬಿ.ಸಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಮಲ ಸಿ ವಂದಿಸಿದರು. ಶಾಲಾ ಸಹ ಶಿಕ್ಷಕಿ ಅಂಬಿಕಾ ಎನ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ರತ್ನಾವತಿ ಕೆ, ಸಹ ಶಿಕ್ಷಕರಾದ ಕೀರ್ತಿರಾಜ್, ಗೌರವ ಶಿಕ್ಷಕರಾದ ಭರತ್ ಕೆ, ರೇವತಿ, ಕಂಪ್ಯೂಟರ್ ಶಿಕ್ಷಕಿ ಶ್ರೀಮತಿ ಸುಮಿತ್ರಾ ಎಸ್.ಡಿ.ಎಂ.ಸಿ ಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಊರಿನ ದಾನಿಗಳು, ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.
ಪಂದ್ಯಾಟಕ್ಕೆ ಆಗಮಿಸಿದ ಸುಳ್ಯ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಶ್ರೀಮತಿ ಆಶಾನಾಯಕ್ ಪಂದ್ಯಾಟ ಹಾಗೂ ಕ್ರೀಡಾಪಟುಗಳಿಗೆ ಶುಭಹಾರೈಸಿ ಸಂಘಟನಾ ಸಂಸ್ಥೆಯವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ಉಪಸ್ಥಿತಿತರಿದ್ದರು. ಬಹುಮಾನ ವಿತರಣೆಯ ಬಳಿಕ ಶಾಲಾ ಶಿಕ್ಷಕಿ ಶ್ರೀಮತಿ ರತ್ನಾವತಿ ವಂದಿಸಿದರು.
ಬಾಲಕರ ವಿಭಾಗದಲ್ಲಿ ಸುಳ್ಯ ಸೈಂಟ್ ಜೋಸೆಫ್ ಆ.ಮಾ ಶಾಲಾ ವಿದ್ಯಾರ್ಥಿಗಳಾದ ಪ್ರೀತನ್ ವಿನ್ಸ್ ಡಿ’ಸೋಜ ಪ್ರಥಮ, ಸಂತೋಷ್ ಆರ್ ದ್ವಿತೀಯ, ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿ ಮಹಮ್ಮದ್ ಜಾಸಿಮ್ ಶಹಿರ್ ತ್ರತೀಯ ಮತ್ತು ಚೊಕ್ಕಾಡಿ ಸತ್ಯಸಾಯಿ ವಿದ್ಯಾಸಂಸ್ಥೆಯ ಮಯೂರ ಕೆ ಚತುರ್ಥ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಬಾಲಕಿಯರ ವಿಭಾಗದಲ್ಲಿ ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದ
ಆದ್ಯ ಸಿ ಪ್ರಥಮ, ಸುಳ್ಯ ಸೈಂಟ್ ಜೋಸೆಫ್ ಆ.ಮಾ ಶಾಲಾ ವಿದ್ಯಾರ್ಥಿನಿ ಅವನಿ ಎಂ.ಎಸ್ ಗೌಡ ದ್ವೀತಿಯ, ಅಯ್ಯನಕಟ್ಟೆ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ವಂದನಾಭಟ್ ವಿ ತ್ರತೀಯ, ಬೆಳ್ಳಾರೆ ಕೆಪಿಎಸ್ ನ ಮಾನ್ವಿಕಾ ಎಸ್ ಚತುರ್ಥ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.