ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಕರ ವಿಕಸನವಾಗಬೇಕು : ಡಾ. ಚಂದ್ರಶೇಖರ ದಾಮ್ಲೆ

0

ಶಿಕ್ಷಕರಾಗಿ ವೃತ್ತಿಗೆ ಸೇರಿದವರು ಶಾಲೆಯಲ್ಲಿ ಸಿಕ್ಕಿದ ಅನುಕೂಲಗಳನ್ನು ಉಪಯೋಗಿಸುತ್ತಾ ಅನಾನುಕೂಲಗಳನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳ ಪಾಲಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಒದಗಬೇಕು. ಅದಕ್ಕಾಗಿ ಶಿಕ್ಷಕರಿಗೂ ವಿಶೇಷ ತರಬೇತಿ ಬೇಕಾಗುತ್ತದೆ. ಆ ದೃಷ್ಟಿಯಿಂದ ನಮ್ಮ ಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂಬುದಾಗಿ ಡಾ. ಚಂದ್ರಶೇಖರ ದಾಮಲೆಯವರು ಹೇಳಿದರು. ಅವರು ಸ್ನೇಹ ಶಾಲೆಯಲ್ಲಿ ಜರಗಿದ ಶಿಕ್ಷಕರ ತರಬೇತಿ ಶಿಬಿರದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು.


ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮನಶಾಸ್ತ್ರಜ್ಞ ಅಕ್ಷರ ದಾಮಲೆಯವರು ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿದ ಈ ಶಿಬಿರವನ್ನು ದೆಹಲಿಯ ಪರಿಸರ ಸಂಶೋಧಕ ಮತ್ತು ಲೇಖಕ ಅರುಣ ಕಶ್ಯಪ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಆರಂಭದಲ್ಲಿ ಶಿಕ್ಷಕಿ ಶ್ರೀದೇವಿ ಯವರಿಂದ ಪ್ರಾರ್ಥನೆಯಾದ ಬಳಿಕ ಮುಖ್ಯ್ಯೊಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮೀ ದಾಮಲೆಯವರು ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕಿ ಶ್ರೀಮತಿ ಸವಿತಾರವರು ವಂದಿಸಿದ ಕಾರ್ಯಕ್ರಮವನ್ನು ಶಿಕ್ಷಕ ದೇವಿಪ್ರಸಾದ್ ರವರು ನಿರೂಪಿಸಿದರು.