ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ನಿಷೇಧಿಸಿ, ರಾಷ್ಟ್ರ ಧ್ವಜ ಅಪಮಾನ ತಡೆಗಟ್ಟುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಆ.8ರಂದು ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ. ಯವರಿಗೆ ಮನವಿ ಸಲ್ಲಿಸಲಾಗಿದೆ.
ಇದೇ ಮನವಿಯ ಜತೆಗೆ ರಾಜಧಾನಿಯಲ್ಲಿ ಅಕ್ರಮ ಮಾಂಸ ಸರಬರಾಜು ಆದದ್ದನ್ನು ಖಂಡಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ವಿನಂತಿ ಮಾಡಿದ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷರಾದ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಎಸ್ ಪಿ ಚಂದನ್ ಅವರನ್ನು ಅಮಾನತು ಪಡಿಸಬೇಕೆಂದು ಸಮಿತಿ ಆಗ್ರಹಿಸಿತು. ಹಾಗೂ ರಾಮನಗರದ ಹೆಸರು ದಕ್ಷಿಣ ಬೆಂಗಳೂರು ಎಂದು ಮರು ನಾಮಕರಣ ಮಾಡಿದ್ದನ್ನು ಖಂಡನೀಯ ಎಂದು ಮನವಿಯಲ್ಲಿ ತಿಳಿಸಿದೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ರವರು ಪ್ಲಾಸ್ಟಿಕ್ ಧ್ವಜದ ಮಾರಾಟ ಮಾಡದ ಹಾಗೆ ಪ್ರತಿ ಅಂಗಡಿಗಳಿಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಬಳಿಕ ಸುಳ್ಯ ಕ್ಷೇತ್ರ ಶಿಕ್ಷಾಧಿಕಾರಿಗಳಿಗೆ, ಪೋಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಧನಂಜಯ, ಶೇಷಪ್ಪ, ನಂದಕುಮಾರ್, ಜಯಪ್ರಕಾಶ್, ರಾಧಾಕೃಷ್ಣ ಕಲ್ಚಾರ್ ಮೊದಲಾದವರು ಇದ್ದರು.