ಕುಂಟಿಕಾನ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

0

ಅಮರಮುಡ್ನೂರು ಗ್ರಾಮದ ಕುಂಟಿಕಾನ ಅಂಗನವಾಡಿ ಕೇಂದ್ರಕ್ಕೆ ಬ್ಯಾಂಕ್ ಆಪ್ ಬರೋಡಾ ದೊಡ್ಡತೋಟ ಶಾಖೆಯ ವತಿಯಿಂದ ಟೇಬಲ್ , ಚಯರ್ ಹಾಗೂ ಮಕ್ಕಳ ಚೆಯರ್ ಗಳನ್ನು ಕೊಡುಗೆಯಾಗಿ ನೀಡಿದರು.


ಈಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಿಂದ 1 ನೇ ತರಗತಿಗೆ ಸೇರಿರುವ ಪುಟಾಣಿಗಳಾದ ಹರ್ಷ ಕೋಣಕಜೆ , ವೈಷ್ಣವಿ ಕೋಣಕಜೆ , ದೃತಿ ಮೈರ್ಪಲ್ಲ ಪಾತ್ರೆ ಇಡುವ ಸ್ಟಾಂಡ್ ನ್ನು , ಶೌರ್ಯ ಕುಂಟಿಕಾನ ಸ್ಟಾಂಡ್ ಫ್ಯಾನ್, ಅದ್ವಿಕಾ ಮೇರ್ಕಜೆ ಮಿಕ್ಸಿ, ಪಂಚಮಿ ಕೋಣಕಜೆ ಟೀಪಾಯಿ, ಸಾನ್ವಿತ್ ಮೈರ್ಪಲ್ಲ ಹೂವಿನ ಚಟ್ಟಿಯ ಬಾಬ್ತು ಧನ್ಯಶ್ರೀ ಚಿಲ್ಪಾರ್ ರವರು ಧನಸಹಾಯ ನೀಡಿದರು.