ಕಲ್ಲುಗುಂಡಿ ಕೆನರಾ ಬ್ಯಾಂಕ್ ನಲ್ಲಿ ಸಿಬ್ಬಂದಿಗಳ ಕೊರತೆ

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೆನರಾ ಬ್ಯಾಂಕ್ ನಲ್ಲಿ ಸಿಬ್ಬಂದಿಗಳ ಕೊರತೆಯಿಂದ ಗಂಟೆ ಗಟ್ಟಲೆ ನಿಂತು ಗ್ರಾಹಕರು ಪರದಾಡುತ್ತಿರುವ ಸಂಭವ ಬ್ಯಾಂಕ್ ನಲ್ಲಿ (ಆ.13)ರಂದು ನಡೆದಿವೆ .

ಬ್ಯಾಂಕ್ ಸಿಬ್ಬಂದಿಗಳು ಕಲ್ಲುಗುಂಡಿಗೆ ಬಂದರೂ ಒಂದೆರಡು ತಿoಗಳಲ್ಲಿ ವರ್ಗಾವಣೆ ಆಗುವ ಪರಿಸ್ಥಿತಿ ಎದುರಾಗಿದೆ .

ಇದರಿoದ ಸಾಮಾನ್ಯ ಜನರು ದಿನವಿಡೀ ಬ್ಯಾಂಕ್ ನಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ನಿಲ್ಲುವ ಪರಿಸ್ಥಿತಿ ಕೂಡಾ ಎದುರಾಗಿದೆ. ಅದರಲ್ಲೂ ಎ ಟಿ ಎಂ ಒಂದು ವಾರದಿಂದ ಅಸ್ತವ್ಯಸ್ತವಾಗಿದ್ದು , ಸರಿಯಾಗಿ ಸಮಯಕ್ಕೆಕರೆಂಟ್ ಇಲ್ಲದ ಕಾರಣ ಗ್ರಾಹಕರಿಗೆ ಹಣ ಡ್ರಾ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇದರಿಂದ ಆದಷ್ಟು ಬೇಗನೇ ಹೆಚ್ಚುವರಿ ಸಿಬ್ಬಂದಿಗಳನ್ನು ಬ್ಯಾಂಕ್ ಗೆ ಅಪಾಯಿಮೆಂಟ್ ಮಾಡಬೇಕಾಗಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.