ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸಲಾಯಿತು.

ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಧ್ವಜಾರೋಹಣ ಮಾಡಿದರು.

ಈ ಸಂದರ್ಭ ಉಪಾಧ್ಯಕ್ಷರಾದ ಅಶ್ವತ್ ಯಳದಾಲು, ಗ್ರಾ.ಪಂ ಸದಸ್ಯರುಗಳಾದ ಮಾಧವ ಕೆ ಚಾಂತಾಳ, ಪುಷ್ಪ ರಾಜ ಪಡ್ಪು, ಶ್ರೀಮತಿ ಶಿವಮ್ಮ ಕಟ್ಟ, ಗ್ರಾ.ಪಂ ಸಿಬ್ಬಂದಿಗಳಾದ ಸಂತೋಷ್ ನಾಯ್ಕ ಗಡಿಕಲ್ಲು, ಲೀಲಾವತಿ ಶಿರೂರು, ವಸಂತ ಕೊರಂಬಟ, ನವ್ಯ ನಡುಗಲ್ಲು, ಮಮತಾ ಚಾರ್ಮತ, ಆಶಿಶ್ ಕಟ್ಟೆ ಮನೆ, ಸಂಜೀವಿನಿ ಸಂಘದ ವಿಶಾಲಾಕ್ಷಿ ಗೋಳ್ಯಾಡಿ, ಬಂಗ್ಲೆಗುಡ್ಡೆ ಶಾಲಾ ಮುಖ್ಯೋಪಾಧ್ಯಾಯರಾದ ಕಮಲ, ದೈಹಿಕ ಶಿಕ್ಷಕರಾದ ಕಿಶೋರ್ ಕೊಂದಾಳ ಉಪಸ್ಥಿತರಿದ್ದರು. ಪಂಚಾಯತು ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಬಿ ಸ್ವಾಗತಿಸಿದರು, ಗ್ರಾಮ ಪಂಚಾಯತು ಕಾರ್ಯದರ್ಶಿ ಮೋಹನ್.ಕೆ ಕಡ್ತಲ್ ಕಜೆ ವಂದಿಸಿದರು, ಬಂಗ್ಲೆಗುಡ್ಡೆ ಶಾಲಾ ವಿದ್ಯಾರ್ಥಿಗಳು, ಕೆಲ ಗ್ರಾಮಸ್ಥರು ಉಪಸ್ಥಿತರಿದ್ದರು.